ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯಿಂದ ಭವ್ಯ ರಾಷ್ಟ್ರ ನಿರ್ಮಾಣ ಸಾಧ್ಯ: ಮಲ್ಲಿಕಾರ್ಜುನ ಪಾಟೀಲ

Published 27 ಮೇ 2024, 15:23 IST
Last Updated 27 ಮೇ 2024, 15:23 IST
ಅಕ್ಷರ ಗಾತ್ರ

ಚಿಟಗುಪ್ಪ: 'ದೇಶದ ಅಖಂಡತೆ, ಏಕತೆ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ರಾಷ್ಟ್ರ ನಿರ್ಮಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ' ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ತಾಲ್ಲೂಕಿನ ಮಾಡಗುಳ, ಶಾಮತಾಬಾದ್ ಗ್ರಾಮಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ದೇಶದ ಆರ್ಥಿಕ ಸ್ವಾವಲಂಬನೆ ಬಲಿಷ್ಠಗೊಳಿಸಿ ಯುವಜನಾಂಗಕ್ಕೆ‌ ಸಹಸ್ರಾರು ಉದ್ಯೋಗ ಒದಗಿಸುವ ಕಾರ್ಯ ಮೋದಿ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿದೆ. ಪಾರದರ್ಶಕ ಆಡಳಿತ ನೀಡುತ್ತಿದ್ದು ಪದವೀಧರ ಮತದಾರರು ಬಿಜೆಪಿ ಅಭ್ಯರ್ಥಿಗೆ‌ ಮತ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ತಾಲ್ಲೂಕು ಸಂಚಾಲಕ ಮಲ್ಲಿಕಾರ್ಜುನ ಕುಂಬಾರ, ಬೂತ್ ಪ್ರಭಾರಿಗಳಾದ ಸೂರ್ಯಕಾಂತ ಮಠಪತಿ, ರಾಜಗೋಪಾಲ ಐನಾಪುರ, ಜಗನ್ನಾಥ ದೇವಣಿ, ಶ್ರೀಕಾಂತ, ಸಂಗಮೇಶ್, ರಾಜು ಡಬ್ಬಿ, ಅನಿಲಕುಮಾರ, ಈಶ್ವರ ನೆಲಗಿ, ಮಹಾದೇವ, ಅಸದ ಪಾಟೀಲ, ಪ್ರವೀಣ ಕಲ್ಯಾಣಿ ಹಾಗೂ ರವಿ ಹೊಸಳ್ಳಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT