ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯದಲ್ಲಿ ಸಾರ್ವತ್ರಿಕ ಹಿತ ಅಡಗಿರಲಿ

ಕವನ ಸಂಕಲನ ಬಿಡುಗಡೆ: ಸಾಹಿತಿ ಬಸವರಾಜ ಬಲ್ಲೂರ ಸಲಹೆ
Last Updated 4 ಜನವರಿ 2020, 11:52 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಕಾವ್ಯ ಬರೀ ಶಬ್ದಗಳ ಭಂಡಾರ ಹಾಗೂ ಪಾಂಡಿತ್ಯದ ಪ್ರದರ್ಶನವಾಗದೆ ಅದರಲ್ಲಿ ಸಾರ್ವತ್ರಿಕ ಹಿತ ಅಡಗಿರಬೇಕು’ ಎಂದು ಸಾಹಿತಿ ಡಾ.ಬಸವರಾಜ ಬಲ್ಲೂರ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪ್ರತಿಮಾ ಪ್ರಕಾಶನದಿಂದ ಸಾತ್ವಿಕ ವಿ.ಪಾಟೀಲನ 2 ನೇ ಹುಟ್ಟುಹಬ್ಬದ ನಿಮಿತ್ತ ಗುರುವಾರ ಇಲ್ಲಿ ಆಯೋಜಿಸಿದ್ದ ವೀರಶೆಟ್ಟಿ ಪಾಟೀಲ ಅವರ ‘ಮೂರನೇ ಮಹಾಯುದ್ಧ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಒತ್ತಡದಿಂದ ಹೊರಹೊಮ್ಮದೆ ಅಂತರಾತ್ಮದಿಂದ ಮೂಡಿಬರಬೇಕು. ಮೂರನೇ ಮಹಾಯುದ್ಧ ಸಂಕಲನವ ಸಾಮಾಜಿಕ ಕಳಕಳಿ ಅಭಿವ್ಯಕ್ತಪಡಿಸಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಮಾತನಾಡಿ, ‘ಕಲಬೆರಕೆ ಆಹಾರದಿಂದ ನಾನಾ ರೋಗಗಳು ಬಂದು ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ. ಇದನ್ನೇ ವೀರಶೆಟ್ಟಿಯವರು ಯುದ್ಧವಾಗಿದೆ ಎಂಬುದನ್ನು ಕಲ್ಪಿಸಿ ಕಾವ್ಯ ಬರೆದಿದ್ದಾರೆ’ ಎಂದರು.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ದೇವೇಂದ್ರ ಬರಗಾಲೆ, ಉಪನ್ಯಾಸಕ ಅಂಬರೀಶ ಭೀಮಾಣೆ, ಚನ್ನಬಸಪ್ಪ ಶೆಟ್ಟೆಪ್ಪ, ರಾಜಕುಮಾರ ಪಾಲಾಪುರೆ ಮಾತನಾಡಿದರು.

ಮಲ್ಲಿಕಾರ್ಜುನ ಕಾಡಾದಿ, ಡಾ.ಚಿತ್ರಶೇಖರ ಚಿರಳ್ಳಿ, ಪಂಚಾಕ್ಷರಿ ಹಿರೇಮಠ, ನಾಗೇಂದ್ರ ಬಿರಾದಾರ, ವೀರಶೆಟ್ಟಿ ಎಂ.ಪಾಟೀಲ, ಹಣಮಂತರಾವ್ ವಿಸಾಜಿ, ಗೌತಮ ಬಕ್ಕಪ್ಪ ಹಾಗೂ ದಿವ್ಯಾರಾಣಿ ಕವನ ವಾಚಿಸಿದರು.

ಉಪ ವಿಭಾಗಾಧಿಕಾರಿಯಾಗಿ ಆಯ್ಕೆಗೊಂಡಿರುವ ಸಾವಿತ್ರಿ ಬಿರಾದಾರ, ಡಿಡಿಪಿಯು ರಮೇಶ ಬೆಜಗಂ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ತುಳಸಿರಾಮ ಕುಂಬಾರೆ ಅವರನ್ನು ಸನ್ಮಾನಿಸಲಾಯಿತು.

ತಿಪ್ಪಣ್ಣ ಚಿಂತಾಲೆ, ಪ್ರತಿಮಾ ಪಾಟೀಲ, ಚನ್ನವೀರ ಜಮಾದಾರ, ನರಸಿಂಗರೆಡ್ಡಿ ಗದ್ಲೇಗಾಂವ, ಕ್ಷೇಮಲಿಂಗ ಬೆಳಮಗಿ, ಶಿವಕುಮಾರ ಮಠಪತಿ, ಚಂದ್ರಶೇಖರ ಸ್ವಾಮಿ, ಮಹಾದೇವ ಬಿರಾದಾರ ಪಾಲ್ಗೊಂಡಿದ್ದರು. ಅತಿಥಿಗಳಿಗೆ ಪುಷ್ಪಮಾಲೆಯ ಬದಲಾಗಿ ಮೆಂತೆ ಸೊಪ್ಪನ್ನು ನೀಡಿ ಸತ್ಕರಿಸಿರುವುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT