ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್ | ತಗ್ಗಿಗೆ ಇಳಿದ ಬಸ್: ತಪ್ಪಿದ ಅವಘಡ

Published : 3 ಆಗಸ್ಟ್ 2024, 16:16 IST
Last Updated : 3 ಆಗಸ್ಟ್ 2024, 16:16 IST
ಫಾಲೋ ಮಾಡಿ
Comments

ಔರಾದ್: ಕಲ್ಯಾಣ ಕರ್ನಾಟ ಸಾರಿಗೆ ಸಂಸ್ಥೆ ಬೀದರ್ ಘಟಕದ ಬಸ್ ತಾಲ್ಲೂಕಿನ ವಡಗಾಂವ್ (ಡಿ) ಬಳಿ ಏಕಾ ಏಕಿ ತಗ್ಗಿಗೆ ಇಳಿದು ಕೆಲ ಹೊತ್ತು ಪ್ರಯಾಣಿಕರು ಗಾಬರಿಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಬೀದರ್‌ನಿಂದ ಔರಾದ್ ತಾಲ್ಲೂಕಿನ ಕರಂಜಿಗೆ ಹೊರಟ ಬಸ್ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಡಗಾಂವ್ ಬಳಿ ತಗ್ಗು ಪ್ರದೇಶಕ್ಕೆ ಇಳಿದಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ತರಾತುರಿಯಲ್ಲಿ ಕೆಳಗೆ ಇಳಿದಿದ್ದಾರೆ. ಏಕೆ ಹೀಗಾಗಿದೆ, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಯಾಣಿಕರು ಚಾಲಕ ಹಾಗೂ ನಿರ್ವಾಹಕರನ್ನು ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಬಸ್‌ನಲ್ಲಿ ಸಾಕಷ್ಟು ಸಂಖ್ಯೆ ಜನ ತುಂಬಿದ್ದರು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಬಸ್‌ನ ಸ್ಟೇರಿಂಗ್ ಸಮಸ್ಯೆಯಿಂದ ಹೀಗಾಗಿರಬಹುದು. ಬೀದರ್ ಘಟಕದ ಬಸ್ ಇರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಅಲ್ಲಿಯೇ ಸಿಗುತ್ತದೆ ಎಂದು ಇಲ್ಲಿಯ ಘಟಕ ವ್ಯವಸ್ಥಾಪಕ ಎಸ್.ಪಿ. ರಾಠೋಡ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT