ಭಾನುವಾರ, ಮೇ 22, 2022
21 °C

ಖೂಬಾ ತವರಲ್ಲಿ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಬೀದರ್ ಸಂಸದ ಭಗವಂತ ಖೂಬಾ ಅವರಿಗೆ ಕೇಂದ್ರ ಸಚಿವ ಸ್ಥಾನ ಲಭಿಸಿದ ಪ್ರಯುಕ್ತ ಅವರ ತವರಿನಲ್ಲಿ ಸಂತಸ ಮನೆ ಮಾಡಿದೆ.

ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಪಟ್ಟಣದ ವಿವಿಧೆಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

‘ಒಬ್ಬ ಸಾಮಾನ್ಯ ಕಾರ್ಯಕರ್ತ ದೊಡ್ಡ ಹುದ್ದೆಗೆ ಏರಲು ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ ಎನ್ನುವುದಕ್ಕೆ ಭಗವಂತ ಖೂಬಾ ಅವರೇ ಸಾಕ್ಷಿ’ ಎಂದು ಧುರೀಣ ಶರಣಪ್ಪ ಪಂಚಾಕ್ಷಿರೆ, ರಮೇಶ ಬಿರಾದಾರ ಸಂತಸ ವ್ಯಕ್ತಪಡಿಸಿದರು.

ಖೂಬಾ ಅಭಿಮಾನಿಗಳು, ಕಾರ್ಯ ಕರ್ತರು ಅಮರೇಶ್ವರ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಪೋಕಲವಾರ, ಧುರೀಣ ಮಾದಪ್ಪ ಖೂಬಾ, ಚಂದ್ರಶೇಖರ್ ದೇಶಮುಖ, ಅಮರ ಯಡವೆ, ಶ್ರೀನಿವಾಸ ಖೂಬಾ, ಪ್ರಕಾಶ ಖೂಬಾ, ಶಿವರಾಜ ಅಲ್ಮಾಜೆ, ಪ್ರಕಾಶ ಘುಳೆ, ಶಿವಕುಮಾರ ಮಂಡಲಾಪುರೆ, ಗುರುನಾಥ ನೌಬಾದೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.