ಚಿಟಗುಪ್ಪ(ಹುಮನಾಬಾದ್): ತಾಲ್ಲೂಕಿನ ಬಸೀರಾಪುರ ಗ್ರಾಮದಿಂದ ಮೀನಕೇರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, 8 ವರ್ಷಗಳಿಂದ ದುರಸ್ತಿಯಾಗಿಲ್ಲ. ರಸ್ತೆ ಹಾಕಲಾಗಿದ್ದ ಡಾಂಬರು ಕಿತ್ತುಹೋಗಿದ್ದು, ಗುಂಡಿಗಳು ತುಂಬಿಕೊಂಡಿವೆ.

ಬಸೀಲಾಪುರ ಗ್ರಾಮವು ಮೀನಕೇರಾ ಗ್ರಾ.ಪಂ ವ್ಯಾಪ್ತಿಯಲ್ಲಿದೆ. ಗ್ರಾಮಸ್ಥರು, ವೈಯಕ್ತಿಕ ಕೆಲಸಗಳಿಗೆ ಮೀನಕೇರಾ ಗ್ರಾಮಕ್ಕೆ ತೆರಳಬೇಕು. ರಸ್ತೆ ಹಾಳಾಗಿದ್ದು, ದದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಎಲ್ಲೆಂದರಲ್ಲಿ ತಗ್ಗು, ದಿನ್ನೆಗಳು ನಿರ್ಮಾಣವಾಗಿವೆ.

ಸದ್ಯ ಮಳೆಗಾಲ ಆಗಿದ್ದರಿಂದ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಮಳೆ ನೀರು ಗುಂಡಿಗಳಲ್ಲಿ ಸಂಗ್ರಹಗೊಂಡು ಬೈಕ್ ಸವಾರರಿಗೆ ಕಿರಿಕಿರಿ ಊಂಟಾಗುತ್ತಿದೆ. ಬಟ್ಟೆಗಳು ರಸ್ತೆಯ ಮಳೆ ನೀರಿನಿಂದಾಗಿ ಹಾಳಾಗುತ್ತಿವೆ. ಆರೋಗ್ಯಕ್ಕೂ ತೊಂದರೆ ಆಗುತ್ತಿದೆ ಎಂದು ಬೈಕ್ ಸವಾರರೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಸಿಲಾಪುರ ಗ್ರಾಮದ ಬಹುತೇಕ ರೈತರ ಹೊಲಗದ್ದೆಗಳಿಗೆ ಹೋಗಲು ಈ ರಸ್ತೆಯನ್ನು ಅವಲಂಬಿಸಿರುವುದರಿಂದ ಪಶುಗಳು, ಎತ್ತಿನಗಾಡಿ ಹೆಚ್ಚು ಸಂಚರಿಸುವುದರಿಂದ ರಸ್ತೆ ಮಧ್ಯೆ ಆಳವಾದ ಗುಂಡಿಗಳು ಉಂಟಾಗಿವೆ. ರಾತ್ರಿ ಸಮಯ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟವರು ತಕ್ಷಣ ರಸ್ತೆ ದುರಸ್ತಿ ಕೈಗೊಂಡು ಸಂಪೂರ್ಣವಾಗಿ ಡಾಂಬರೀಕರಣ ಮಾಡಿದರೆ, ಜನರಿಗೆ ಅನುಕೂಲ ಆಗುತ್ತದೆ. ಇಲ್ಲವಾದಲ್ಲಿ ರಸ್ತೆ ಮೇಲೆ ಎಲ್ಲೆಂದರಲ್ಲಿ ನೀರು ನಿಂತು, ಕೆಸರು ಊಂಟಾಗಿ ತುಂಬಾ ಕಷ್ಟವಾಗುತ್ತದೆ. ಮೇಲಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಬಸೀಲಾಪುರ, ಅಲ್ಲಿಪೂರ ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.

ಬಸೀರಾಪುರ ಗ್ರಾಮದ ಬಹುತೇಕ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ಸಾರ್ವಜನಿಕ ಶೌಚಾಲಯವನ್ನೂ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಮಹಿಳೆಯರು ಬಯಲಿಗೆ ತೆರಳುವ ಅನಿವಾರ್ಯ ಎದುರಾಗಿದೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈಗಾಗಲೇ ರಸ್ತೆ ಪರೀಶೀಲನೆ ಮಾಡಲಾಗಿದ್ದು ರಸ್ತೆ ನಿರ್ಮಾಣದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಶೀಘ್ರ ಕ್ರಮವಹಿಸಲಾಗುವುದು
ಭಾನುಪ್ರಕಾಶ ಜಿ.ಪಂ ಉಪವಿಭಾಗ ಅಧಿಕಾರಿ

ರಸ್ತೆ ಸಂಪೂರ್ಣ ಹಾಳಾಗಿದೆ. ನಿತ್ಯವೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಮಾಡಬೇಕು.
ಶ್ರೀಕಾಂತ ಪಾಟೀಲ ಬಸೀರಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.