ಬೀದರ್: ‘ರೋಗ ಮತ್ತು ಒತ್ತಡದಿಂದ ಪಾರಾಗಲು ಹಾಸ್ಯ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ’ ಎಂದು ಆರ್.ಆರ್.ಕೆ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಂಡಯ್ಯ ಸ್ವಾಮಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಹಾಸ್ಯ ಕಲಾವಿದ ಬಸವರಾಜ ಮೂಲಗೆ ಅವರ ನಿವಾಸದಲ್ಲಿ ಆಯೋಜಿಸಿದ್ದ ‘59ನೇ ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಎಲೆಮೆರೆ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸುವ ಕೆಲಸ ಮಾಡುತ್ತಿದೆ. ಹಾಸ್ಯ ಕಲಾವಿದರೂ ಆದ ಬಸವರಾಜ ಮೂಲಗೆ ಅವರು ಶಿಕ್ಷಕ ವೃತ್ತಿ ಜತೆಗೆ ಕನ್ನಡ ಕಟ್ಟುವಲ್ಲಿಯೂ ಮಹತ್ವದ ಕೆಲಸ ಮಾಡುತ್ತಿದ್ದಾರೆ ಎಂದರು.

ಕಲಾವಿದ ಬಸವರಾಜ ಮೂಲಗೆ ಮಾತನಾಡಿ ‘ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಶ್ಲಾಘನೀಯ’ ಎಂದರು.

ಸುನೀತಾ ಮೂಲಗೆ, ಸಾಹಿತಿ ಕಾವ್ಯಶ್ರಿ ಮಹಾಗಾಂವಕರ್ ಇದ್ದರು.

ಕಸಾಪ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಮೇಶ ಬಿರಾದಾರ, ಜಗನ್ನಾಥ ಕಮಲಾಪೂರೆ, ಗಣಪತಿ ಸೋಲಪೂರೆ, ಕಂಟೆಪ್ಪ ಎಣಕೆಮೂರೆ, ಸಿದ್ರಾಮ ಚಪಟೆ, ಮಲ್ಲಿಕಾರ್ಜುನ ಚಪಟೆ, ಜಗನ್ನಾಥ ಪಾಟೀಲ, ವೈಜಿನಾಥ ಪಾಟೀಲ ಶ್ರೀಕಾಂತ ಮೂಲಗೆ, ಸಂತೋಷ, ಸುರೇಖಾ ಶೆಟಕಾರ, ಶೋಭಾವತಿ, ಅರುಣಾದೇವಿ, ಸುವರ್ಣಾ, ಸರಸ್ವತಿ, ನಿರ್ಮಲಾ, ದೀಪಾ ಮಾಳಗೆ, ವಿದ್ಯಾವತಿ ಹಾಗೂ ಅಂಬಿಕಾ ಇದ್ದರು.

ರಾಘವೇಂದ್ರ ಮುತ್ತಂಗಿಕರ್ ಸ್ವಾಗತಿಸಿದರು. ಸಿದ್ಧರೂಢ ಭಾಲ್ಕೆ ನಿರೂಪಿಸಿದರು. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.