ಭಾನುವಾರ, ಜೂನ್ 26, 2022
28 °C

ಬೀದರ್ ಜಿಲ್ಲೆಯಲ್ಲಿ ಮುಂದುವರಿದ ಲಸಿಕಾಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಲಸಿಕಾ ಕಾರ್ಯ ಭರದಿಂದ ಸಾಗಿದೆ.

ತಾಲ್ಲೂಕುಗಳಲ್ಲಿ ತಹಶೀಲ್ದಾರರು ಮತ್ತು ತಾಲ್ಲೂಕು ಪಂಚಾಯಿತಿ ಇಒಗಳು ಲಸಿಕಾರಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ದುರ್ಬಲ ವರ್ಗದ ಗುಂಪಿನವರು ಹಾಗೂ ವಿವಿಧ ಇಲಾಖೆಗಳ ಮಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಕೊಡುವುದು ಮುಂದುವರಿದಿದೆ.

100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಡಾ.ಸೋಹೆಲ್ ನೇತೃತ್ವದಲ್ಲಿ ಬ್ರಹ್ಮವಾಡಿಯಲ್ಲಿ ಅಂಗವಿಕಲರಿಗೆ ಲಸಿಕೆ ಹಾಕಲಾಯಿತು.

ಬಸವಕಲ್ಯಾಣ ತಾಲ್ಲೂಕಿನಲ್ಲಿ ಭಾನುವಾರ ಜನರಿಗೆ ಲಸಿಕೆ ಹಾಕಲಾಗಿದೆ. ಕೋಡಂಬಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಇಟಗಾ ಉಪ ಕೇಂದ್ರದಲ್ಲಿ ನಾಗೇಶ ಬುಳ್ಳಾ ನೇತೃತ್ವದಲ್ಲಿ ಕೋವಿಡ್ ಲಸಿಕಾಕರಣ ನಡೆಯಿತು.

ಮೊದಲನೇ ಡೋಸ್ ದಾಖಲೆ: 18ರಿಂದ 44 ವಯೋಮಾನದವರಿಗೆ ಜೂನ್ 6ರಂದು ಔರಾದ್ ತಾಲ್ಲೂಕಿನಲ್ಲಿ 578, ಭಾಲ್ಕಿ ತಾಲ್ಲೂಕಿನಲ್ಲಿ 1,838, ಬೀದರ್ ತಾಲ್ಲೂಕಿನಲ್ಲಿ 868, ಬಸವಕಲ್ಯಾಣ ತಾಲ್ಲೂಕಿನಲ್ಲಿ 758 ಸೇರಿ ಒಟ್ಟು 4,860 ಜನರಿಗೆ ಮೊದಲನೇ ಡೋಸ್ ನೀಡಲಾಗಿದೆ.

18 ಮತ್ತು 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡಲಾಗುತ್ತಿದೆ. ಬೀದರ್‌ನ ಗುರುದ್ವಾರದ ಗುರುನಾನಕ್ ದೇವ ಆಸ್ಪತ್ರೆಯ ಆವರಣದಲ್ಲಿ ಡಾ.ಎಸ್.ಕೆ. ಬೊಮ್ಮ ನೇತೃತ್ವದಲ್ಲಿ ಲಸಿಕಾರಣ ಪ್ರಕ್ರಿಯೆ ನಡೆಯಿತು.

ಹಾಲುಣಿಸುವ ತಾಯಂದಿರರಿಗೂ ಲಸಿಕೆ: ಎರಡೂವರೆ ತಿಂಗಳಿನ ಮಗು ಹೊಂದಿದ ಹಾಲುಣಿಸುವ ತಾಯಂದಿರರಿಗೂ ಕೂಡ ಕೋವಿಡ್ ಲಸಿಕೆ ಕೊಡಲಾಗುತ್ತಿದೆ. ಕಮಲನಗರ ತಾಲ್ಲೂಕಿನ ತೋರಣಾದಲ್ಲಿ ಸಿಡಿಪಿಒ ಶಂಭುಲಿಂಗ ಹಿರೇಮಠ ನೇತೃತ್ವದಲ್ಲಿ ಲಸಿಕಾಕರಣ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.