ಭಾನುವಾರ, ಜನವರಿ 19, 2020
24 °C
ಕ್ರೀಡೆಗಳಿಂದ ಬೆಳವಣಿಗೆ: ವರಜ್ಯೋತಿ ಭಂತೆ

ಬೀದರ್: ಡಾಂಗೆ ಮೆಮೋರಿಯಲ್ ಟೂರ್ನಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್‌ ಪ್ರೌಢಶಾಲೆ ಆವರಣದಲ್ಲಿ ತ್ರಿಂಬಕ ಡಾಂಗೆ ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ತ್ರಿಂಬಕ್ ಡಾಂಗೆ ಮೆಮೋರಿಯಲ್ ಕ್ರಿಕೆಟ್ ಟೂರ್ನಿಗೆ ವರಜ್ಯೋತಿ ಭಂತೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,‘ವಿದ್ಯಾರ್ಥಿಗಳು ಪಾಠದೊಂದಿಗೆ ಆಟಗಳಲ್ಲಿ ಭಾಗವಹಿಸಬೇಕು. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವುದು’ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ವಿಭಾಗೀಯ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಮಾತನಾಡಿ,‘ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಣಜಿ ಪಂದ್ಯಾವಳಿ ಆಯೋಜಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಮುಖಂಡ ಇಲೇಶಕುಮಾರ ಸೋನಿ, ಸಂಸ್ಥೆ ಅಧ್ಯಕ್ಷೆ ಪ್ರೇಮಿಲಾ ಡಾಂಗೆ, ಪ್ರಶಾಂತ ಡಾಂಗೆ, ಪ್ರಸನ್ನ ಡಾಂಗೆ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು