ಬಾವಗಿ(ಜನವಾಡ): ಉಪ ಜೀವನಕ್ಕೆ ಆಸರೆಯಾಗಿದ್ದ ಹಸು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ರೈತ ಕಾಶೀನಾಥ ಅವರಿಗೆ ಜೆಸ್ಕಾಂ ₹ 50 ಸಾವಿರ ಪರಿಹಾರ ಮಂಜೂರು ಮಾಡಿದೆ.
ಬೀದರ್‌ನಲ್ಲಿ ಈಚೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪರಿಹಾರದ ಚೆಕ್ ವಿತರಿಸಿದರು.
ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ ಪಾಟೀಲ, ಪ್ರಮುಖರಾದ ರಾಜಕುಮಾರ ಪಾಟೀಲ, ಸಂತೋಷ ಜಗದಾಳೆ, ವೀರೇಶ ಬಮಣಿ, ಭೀಮಣ್ಣ ಸೋರಳ್ಳಿ ಇದ್ದರು.