ಬೀದರ್: ಔರಾದ್ ಶಾಸಕ ಪ್ರಭು ಚವಾಣ್ ಅವರು ಗ್ರಾಮ ಸಂಚಾರ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಜನರ ಸಮಸ್ಯೆ ಪರಿಹರಿಸುವುದಕ್ಕೋ ಅಥವಾ ಸಮಸ್ಯೆ ಸೃಷ್ಟಿಸುವುದಕ್ಕೋ ಎಂದು ಮುಖಂಡ ದೀಪಕ್ ಪಾಟೀಲ ಚಾಂದೋರಿ ಪ್ರಶ್ನಿಸಿದ್ದಾರೆ.

ಶಾಸಕರೊಂದಿಗೆ ಅಧಿಕಾರಿಗಳು ಗ್ರಾಮ ಸಂಚಾರಕ್ಕೆ ತೆರಳುತ್ತಿರುವ ಕಾರಣ ತಾಲ್ಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

‘ಶಾಸಕರು ತೋರಿಕೆಗೆ ಹಾಗೂ ಪ್ರಚಾರಕ್ಕಾಗಿ 2009ರಿಂದ ಗ್ರಾಮ ಸಂಚಾರ ನಡೆಸುತ್ತಿದ್ದಾರೆ. ಜನರಿಗೆ ಏನೇನೂ ಉಪಯೋಗ ಆಗಿಲ್ಲ. ಶಾಸಕರ ಗ್ರಾಮ ಸಂಚಾರದ ವೇಳಾ ಪಟ್ಟಿ ನೋಡಿದರೆ, ಸಮಯವಾರು ರೈಲು ನಿಲುಗಡೆಯ ಹತ್ತಾರು ಸ್ಥಳಗಳ ಪಟ್ಟಿಯಂತೆ ಭಾಸವಾಗುತ್ತದೆ. ಗ್ರಾಮ ಸಂಚಾರ ಫಲಶ್ರುತಿಯಾಗಿದ್ದರೆ, ಶಾಸಕರು ಸಂಚಾರದಲ್ಲಿ ಈವರೆಗೆ ಬಂದ ಜನರ ಅಹವಾಲುಗಳೆಷ್ಟು? ಎಷ್ಟು ಪರಿಹರಿಸಲಾಗಿದೆ, ಎಷ್ಟು ಅರ್ಜಿಗಳು ಬಾಕಿ ಇವೆ? ಇದರ ಪೂರ್ಣ ವಿವರ ನೀಡಬೇಕು’ ಎಂದು ಸವಾಲು ಹಾಕಿದ್ದಾರೆ.

‘ಶಾಸಕರ ಒಂದು ಗ್ರಾಮ ಸಂಚಾರ 15 ನಿಮಿಷಗಳಲ್ಲಿ ಮುಗಿದು ಹೋಗುತ್ತಿದೆ. ಇದರಲ್ಲಿ 10 ನಿಮಿಷ ಕಾರ್ಯಕರ್ತರಿಂದ ಶಾಸಕರ ಮೆರವಣಿಗೆ, ಪಟಾಕಿ ಸಿಡಿಸುವುದು, ಹಾರ, ತುರಾಯಿ ಹಾಕುವುದರಲ್ಲಿ ಕಳೆದು ಹೋಗುತ್ತಿದೆ. ಉಳಿದ 5 ನಿಮಿಷ ಶಾಸಕರ ಸಾಧನೆ ಹೇಳಿಕೊಳ್ಳುವುದಕ್ಕೆ ಸೀಮಿತವಾಗುತ್ತಿದೆ. ಹೆಸರಿಗೆ ಇದು ಗ್ರಾಮ ಸಂಚಾರ. ಇಲ್ಲಿ ಜನರ ಅಹವಾಲು ಆಲಿಸುವುದಕ್ಕೆ ಸಮಯವೇ ಇಲ್ಲ. ಒಂದೇ ದಿನ ಹಲವು ಗ್ರಾಮಗಳಲ್ಲಿ ಇದು, ನಡೆಯುತ್ತಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಒಂದು ಗ್ರಾಮದ ಜನರ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಲು ಕನಿಷ್ಠ 3 ತಾಸಾದರೂ ಬೇಕು. 15 ನಿಮಿಷಗಳಲ್ಲಿ ಸಮಸ್ಯೆ ಆಲಿಸುವುದು, ಪರಿಹರಿಸುವುದು ಸಾಧ್ಯವೇ? ಕ್ಷೇತ್ರದಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿವೆ. ವಾಹನಗಳ ಸಂಚಾರ ದುಸ್ತರವಾಗಿದೆ. ರಸ್ತೆ ದುರಸ್ತಿಗೆ ಆದ್ಯತೆ ಕೊಡುವುದು ಬಿಟ್ಟು ಕಮಿಷನ್ ಹಣಕ್ಕಾಗಿ ಶಾಸಕರು 2023-24 ಹಾಗೂ 2024-25ನೇ ಸಾಲಿನಲ್ಲಿ ಶಾಲಾ ಕೋಣೆ ದುರಸ್ತಿ, ಕೊಳವೆಬಾವಿ ಕೊರೆಸುವುದು ಹಾಗೂ ಸೋಲಾರ್ ಪ್ಯಾನಲ್ ಅಳವಡಿಕೆಗಾಗಿ ಕೆ.ಆರ್.ಐ.ಡಿ.ಎಲ್.ಗೆ ₹40 ಕೋಟಿ ಅನುದಾನ ಕೊಟ್ಟಿದ್ದಾರೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.