ಬೀದರ್: ನಿರಾಶ್ರಿತರಿಗೆ ಆಹಾರ ಪೊಟ್ಟಣ ವಿತರಣೆ

ಬೀದರ್: ನಮ್ಮ ಬೀದರ್ ಯುವ ಚೇತನ ಅಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ನಿರಾಶ್ರಿತರು ಹಾಗೂ ಬಡವರಿಗೆ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.
ಗುಂಪಾ, ರೈಲ್ವೆ ನಿಲ್ದಾಣ, ಕೆಇಬಿ ಹನುಮಾನ ಮಂದಿರ, ಗಾಂಧಿಗಂಜ್, ಪಾಪನಾಶ ಗೇಟ್, ಬಸ್ ನಿಲ್ದಾಣ ಸೇರಿ ವಿವಿಧೆಡೆ ಪೊಟ್ಟಣ ವಿತರಣೆ ಮಾಡಲಾಯಿತು.
‘18 ದಿನಗಳಿಂದ ನಿತ್ಯ 200ಕ್ಕೂ ಹೆಚ್ಚು ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ಉಚಿತ ವಿತರಿಸಲಾಗುತ್ತಿದೆ. ಜೂನ್ 7ರ ವರೆಗೂ ಸೇವೆ ಮುಂದುವರಿಯಲಿದೆ’ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಕಾಂಬಳೆ ತಿಳಿಸಿದರು.
ದಿಲೀಪ್ ಮಿಲ್ಕಾಸಿಂಗ್, ರಜನಿ ಕಾಂತ ತಾರೆ, ಅಬ್ರಾಹಂ, ಸೋಮನಾಥ ಅಯಾಸಪುರೆ, ಸೋಮು ಚಳಕಾಪುರ, ಮಹೇಶ ಮೂರ್ತಿ, ಲಕ್ಷ್ಮೀಕಾಂತ ಗೂಡೆ, ನಾಗೇಶ ವರ್ಮಾ, ಪ್ರೀತಂ ಸಾಧುರೆ, ಸುಶೀಲ್ ಬೆಳ್ಳೂರೆ, ಅಮರ್, ರಾಹುಲ್ ಶಾಖೆ, ಆಕಾಶ ಕಾವೆ, ಹೇಮಂತ ಫುಲೇ ಕರ್, ರಜನಿಕಾಂತ ರಾಘಾಪುರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.