ಶುಕ್ರವಾರ, ಮೇ 14, 2021
25 °C

ವಿವಿಧೆಡೆ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಬೀದರ್: ನಗರದ ವಿವಿಧೆಡೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 130ನೇ ಜನ್ಮದಿನ ಆಚರಣೆ ಸಮಿತಿ ವತಿಯಿಂದ ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ಶಾಸಕ ಬಂಡೆಪ್ಪ ಕಾಶೆಂಪೂರ್, ರಹೀಂಖಾನ್, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ರಾಜೇಂದ್ರಕುಮಾರ ಗಂದಗೆ, ಸುರೇಶ ಚನಶೆಟ್ಟಿ, ಸಂಜೀವಕುಮಾರ ಅತಿವಾಳೆ, ಅನಿಲಕುಮಾರ ಬೆಲ್ದಾರ್, ರಾಜಕುಮಾರ ಮೂಲಭಾರತಿ, ಶ್ರೀಪತರಾವ್ ದೀನೆ, ಮಾರುತಿ ಬಿ. ಕಂಟೆ, ಅಶೋಕ ಮಾಳಗೆ, ಅರುಣ ಪಟೇಲ್, ನಾಗೇಂದ್ರ ದಂಡೆ ಮೊದಲಾದವರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಕಚೇರಿ:
ನಗರದ ಶಿವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ಡಿ.ಕೆ. ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಶಿಧರ ಭಾಷನ್, ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಮಲ್ಲಿಕಾರ್ಜುನ ಮೋಳಕೆರೆ, ವಿಶಾಲ ದೊಡ್ಡಿ, ಸುನಿಲ್ ಬಚನ್, ರವೀಂದ್ರಕುಮಾರ, ಶಿವಮೂರ್ತಿ, ಸ್ವಾಮಿದಾಸ ಉಜನಿಕರ್, ಗೌತಮ ಇದ್ದರು.

ಎಸ್‍ಬಿಐ:
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಮುಖ್ಯ ವ್ಯವಸ್ಥಾಪಕ ಶಿವಪ್ರಸಾದ ಅವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಉಪ ವ್ಯವಸ್ಥಾಪಕ ರಮೇಶ ಸಿಂಧೆ, ಗೌರವ ಸೋನವಾನೆ, ನವೀನ್ ಕೃಷ್ಣ, ಯಶವಂತ ನಾಯಕ, ಪದ್ಮಾ ಕಣಿಕೆ, ಜಗನ್ನಾಥ ಡಬ್ಲ್ಯೂ, ಶಶಿಕಾಂತ ಕಾಳೆ, ಸಂತೋಷಕುಮಾರ ಮಿತ್ರಾ, ದೀಪಕ್, ವೆಂಕಟೇಶ, ಯಾಸ್ಯಾ ಇದ್ದರು. ವಿಷ್ಣುಕಾಂತ ಪಿ. ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.