ಬೀದರ್: ನಗರದ ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯದಲ್ಲಿ ನಡೆದ ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ ಸ್ಪರ್ಧೆಯು ಸಭಿಕರ ಮನ ರಂಜಿಸಿತು.

ಎರಡು ವಿಭಾಗಗಳಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರಸಿದ್ಧ ಹಿಂದಿ, ಕನ್ನಡ ಹಾಗೂ ಇಂಗ್ಲಿಷ್ ಹಾಡುಗಳನ್ನು ಹಾಡಿ ಚಪ್ಪಾಳೆಗೆ ಪಾತ್ರರಾದರು.

ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ 6ನೇ ತರಗತಿಯ ಹರ್ಷ ಸಂತೋಷ ಬಿರಾದಾರ ಪ್ರಥಮ, ಆದಿತಿ ಭಾವುರಾವ್ ದ್ವಿತೀಯ, ನಿಧಿ ರಾಜೇಶ್ ತೃತೀಯ ಹಾಗೂ ಪೂರ್ವಿ ಆರ್.ಪಿ. ಗೌಡ್ ಸಮಾಧಾನಕರ ಬಹುಮಾನ ಪಡೆದರು.

ಪ್ರೌಢಶಾಲೆ ವಿಭಾಗದ ಸ್ಪರ್ಧೆಯಲ್ಲಿ 9ನೇ ತರಗತಿಯ ಅಂತ್ರ ಶಾಂತಕುಮಾರ ಪ್ರಥಮ, 10ನೇ ತರಗತಿಯ ಆದಿತಿ ರಾಜಕುಮಾರ ದ್ವಿತೀಯ, 9ನೇ ತರಗತಿಯ ಆಶಿಶ್ ಮಚಂದರ್ ತೃತೀಯ ಬಹುಮಾನ ಗಳಿಸಿದರು. 9ನೇ ತರಗತಿಯ ಶಾರುನ್ ತುಕಾರಾಮ ಮತ್ತು 8ನೇ ತರಗತಿಯ ತಕ್ಷ ಗಿರೀಶ್ ಸಮಾಧಾನಕರ ಬಹುಮಾನ ಪಡೆದರು.

ಗಾಯಕರಾದ ಮಲ್ಲಿಕಾರ್ಜುನ, ಕಿರಣ ತೀರ್ಪುಗಾರರಾಗಿದ್ದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ., ನಿರ್ದೇಶಕ ಮುನೇಶ್ವರ ಲಾಖಾ, ಪ್ರಾಚಾರ್ಯೆ ಸುನೀತಾ ಸ್ವಾಮಿ, ಉಪ ಪ್ರಾಚಾರ್ಯೆ ಕಲ್ಪನಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.