ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಶಾಸಕ ಪ್ರಭು ಚವಾಣ್ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ; ದೂರು

Published 12 ಆಗಸ್ಟ್ 2023, 15:27 IST
Last Updated 12 ಆಗಸ್ಟ್ 2023, 15:27 IST
ಅಕ್ಷರ ಗಾತ್ರ

ಔರಾದ್: ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಅಸಂಬದ್ಧ ಹೇಳಿಕೆ ಹಾಗೂ ಸಂಬಂಧವಲ್ಲದ ಮಾಹಿತಿ ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದ್ದಾರೆ.

ನಕಲಿ ಖಾತೆ ರೂಪಿಸಿದ ಕುರಿತು ಅವರು ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಹಿಂದೆಯೇ ಪೊಲೀಸರಿಗೂ ದೂರು ನೀಡಿರುವುದಾಗಿ ಅವರು ದೃಢಪಡಿಸಿದ್ದಾರೆ.

ನನ್ನ ಅಧಿಕೃತ ಪ್ರವಾಸ, ಸಭೆ, ಸಮಾರಂಭ ಹಾಗೂ ಕ್ಷೇತ್ರದ ಪ್ರಗತಿ ವಿಷಯ ಮಾತ್ರ ನನ್ನ ಅಧಿಕೃತ ಫೇಸ್ ಬುಕ್ನಲ್ಲಿ ತಿಳಿಸಲಾಗುತ್ತದೆ. ನನ್ನ ಹೆಸರಿನಲ್ಲಿ ಬರುವ ಅನಧಿಕೃತ ಮಾಹಿತಿಯನ್ನು ಯಾರೂ ನಂಬಬಾರದು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT