ಬೀದರ್: ‘ಗೀಗೀ ಪದ, ಕೋಲಾಟ, ಕುಟ್ಟುವ, ಬೀಸುವ, ಹಂತಿ, ಸೋಬಾನ ಪದ ಮೊದಲಾದ ಜಾನಪದ ಕಲೆಗಳು ಇನ್ನೂ ಹಳ್ಳಿಗಳಲ್ಲೇ ಉಳಿದುಕೊಂಡಿವೆ’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನುಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾ ಜಾನಪದ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ್ದ ಜಾನಪದ ಗಾಯನ ಹಾಗೂ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿಕೊಳ್ಳಬೇಕಿದೆ. ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯ ಇದೆ’ ಎಂದು ತಿಳಿಸಿದರು.

‘ಸಾಹಿತಿ ಪಾರ್ವತಿ ಸೋನಾರೆ ಅವರು ಜಾನಪದ ಕಲಾವಿದ ಚಂದ್ರಶಾ ಮಾಳಗೆ ಅವರ ಕುರಿತು ಪುಸ್ತಕ ಬರೆದರೆ ಅದರ ಪ್ರಕಟಣೆಗೆ ತಗಲುವ ವೆಚ್ಚವನ್ನು ನಾನು ಹಾಗೂ ರಹೀಂಖಾನ್ ಭರಿಸುತ್ತೇವೆ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು, ಜಿಲ್ಲಾ ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಪ್ರಕಾಶ ಅಂಗಡಿ ಮಾತನಾಡಿದರು.

ಬೆಳಗಾವಿಯ ಜ್ಯೋತಿರ್ಲಿಂಗ ಹೊನಶೆಟ್ಟಿ ಜಾನಪದ ಹಾಡುಗಳನ್ನು ಹಾಡಿದರು. ಬೆಂಗಳೂರಿನ ಭೂಮಿ ತಾಯಿ ಬಳಗದ ಡಿ.ಆರ್.ನಿರ್ಮಲಾ, ಸಿ.ಅರುಣಕುಮಾರ ಹಾಗೂ ರೇಖಾ ಅಪ್ಪಾರಾವ್ ಸೌದಿ ತಂಡದವರು ಗಾಯನ ಪ್ರಸ್ತುತಪಡಿಸಿ ಸಭಿಕರ ಮನ ರಂಜಿಸಿದರು. 2017 ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿಗೆ ಭಾಜನರಾದ ಚಂದ್ರಪ್ಪ ಮಾಳಗೆ ಮತ್ತು ಮಹಾದೇವಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಆರ್.ಸುನೀಲ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪಾರ್ವತಿ ಸೋನಾರೆ, ಕರ್ನಾಟಕ ಜಾನಪದ ಅಕಾಡೆಮಿಯ ಹಿರಿಯ ಸಹಾಯಕ ಎಚ್.ಪ್ರಕಾಶ, ಮಾರುತಿ ಬೌದ್ಧೆ, ಫರ್ನಾಂಡೀಸ್ ಹಿಪ್ಪಳಗಾಂವ್, ವೀರಶೆಟ್ಟಿ ಪಾಟೀಲ, ರಾಜಕುಮಾರ ಹೆಬ್ಬಾಳೆ, ಎಸ್.ವಿ.ಕಲ್ಮಠ, ವಸಂತಕುಮಾರ ನೌಬಾದೆ, ನಾಗೇಂದ್ರ ದಂಡೆ, ಎಂ.ಜಿ.ಗಂಗನಪಳ್ಳಿ, ಎಂ.ಜಿ. ದೇಶಪಾಂಡೆ ಇದ್ದರು.

ಎಂ.ಪಿ.ಮುದಾಳೆ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಯೇಸುದಾಸ ಅಲಿಯಂಬರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.