ಭಾನುವಾರ, ಆಗಸ್ಟ್ 1, 2021
20 °C
ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರಿಂದ ವಿತರಣೆ

ರಾಹುಲ್‌ ಗಾಂಧಿ ಜನ್ಮದಿನಾಚರಣೆ: 350 ಆಟೊ ಚಾಲಕರಿಗೆ ದಿನಸಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ 51ನೇ ಜನ್ಮದಿನದ ಅಂಗವಾಗಿ ಶಾಸಕ ರಾಜಶೇಖರ ಪಾಟೀಲ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಗೂ 350 ಜನ ಆಟೊ ಚಾಲಕರಿಗೆ ದಿನಸಿ ಪದಾರ್ಥಗಳ ಪೊಟ್ಟಣ ವಿತರಿಸಿದರು.

‘ಕೋವಿಡ್ ಲಾಕ್‌ಡೌನ್‍ಯಿಂದ ದುಡಿಮೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೊ ಚಾಲಕರಿಗೆ ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ತಜ್ಞರ ವರದಿಗಳ ಪ್ರಕಾರ ಮತ್ತೆ ಕೋವಿಡ್ ಮೂರನೇ ಅಲೆ ಬರಬಹುದು ಎನ್ನಲಾಗುತ್ತಿದೆ. ಹಾಗಾಗಿ, ಕಡ್ಡಾಯವಾಗಿ ಎಂದಿನಂತೆ ಮಾಸ್ಕ್, ಸ್ಯಾನಿಟೈಸರ್‌, ವ್ಯಕ್ತಿಗತ ಅಂತರವನ್ನು ಕಾಪಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅಫ್ಸರ್‌ಮಿಯ್ಯಾ, ಮಲ್ಲಿಕಾರ್ಜುನ ಮಾಶೆಟ್ಟಿ, ಉಮೇಶ್ ಜಮಗಿ, ಶಿವರಾಜ ಗಂಗಶೆಟ್ಟಿ, ಪ್ರಕಾಶ್ ಕಾಗೋಡಕರ್, ರವಿ ಘಾಗೋಳಕರ್ ಇದ್ದರು.

ಆಹಾರಧಾನ್ಯ ಕಿಟ್ ವಿತರಣೆ

ಔರಾದ್: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಬಡ ಮಹಿಳೆಯರಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ಕಿಟ್ ವಿತರಿಸಿ, ‘ರಾಹುಲ್ ಗಾಂಧಿ ಅವರು ಜನ ಮೆಚ್ಚಿದ ನಾಯಕ. ಬಡವರು, ಕಾರ್ಮಿಕರು ಹಾಗೂ ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದವರು’ ಎಂದರು.

ಧುರೀಣ ಗುಂಡುರಾವ ಕಂದಗೂಳ ಮಾತನಾಡಿ, ‘ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬ. ರಾಜೀವ್ ಗಾಂಧಿ ಈ ದೇಶದ ಅವಿಸ್ಮರಣೀಯ ಪ್ರಧಾನಿ. ನಾವು ಈಗ ಕಂಪ್ಯೂಟರ್ ಯುಗದಲ್ಲಿ ಇರಲು ಅವರೇ ಕಾರಣ. ಅಂತಹ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗುವುದು ಅನಿವಾರ್ಯವಾಗಿದೆ’ ಎಂದರು.

ಪಕ್ಷದ ವಕ್ತಾರ ಸಾಯಿಕುಮಾರ ಘೋಡ್ಕೆ ಮಾತನಾಡಿ, ‘ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ಬಡ ಮಹಿಳೆಯರನ್ನು ಗುರುತಿಸಿ 100 ಆಹಾರಧಾನ್ಯದ ಕಿಟ್ ವಿತರಿಸಿದ್ದೇವೆ’ ಎಂದು ಹೇಳಿದರು.

ರಾಮಣ್ಣ ವಡೆಯರ್, ಆನಂದ ಚವಾಣ್, ಮಾರುತಿ ಸೂರ್ಯವಂಶಿ, ಶಿರೋಮಣಿ, ಶ್ರಾವಣಕುಮಾರ ಭಂಡೆ, ಅಬ್ದುಲ್ ರಹೀಮಸಾಬ್, ಸಂತೋಷ ಕಲಾಲ್ ಇದ್ದರು.

ಕಾಂಗ್ರೆಸ್‌ ಕಾರ್ಯಕರ್ತರಿಂದ ರಕ್ತದಾನ

ಬೀದರ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಆವರಣದಲ್ಲಿ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ರಕ್ತದಾನ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಕೊರೊನಾ ಸೋಂಕಿತರು, ರೋಗಿಗಳಿಗೆ ಹಣ್ಣು, ಮಾಸ್ಕ್‌ ವಿತರಿಸಲಾಯಿತು.

ಶಾಸಕರಾದ ರಾಜಶೇಖರ್ ಪಾಟೀಲ, ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮಾಜಿ ಸಂಸದ ನರಸಿಂಗ್‌ ಸೂರ್ಯವಂಶಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಜಿಲ್ಲಾ ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಡಿ.ಕೆ.ಸಂಜುಕುಮಾರ, ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ವನಿಲಾ, ಯುವ ಕಾಂಗ್ರೆಸ್‌ ಅಧ್ಯಕ್ಷ ಬರೀದ್‌, ಆನಂದ ದೇವಪ್ಪ, ಇರ್ಷಾದ್ ಪೈಲ್ವಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು