ಬೀದರ್: ನಗರದಲ್ಲಿ ಈಗಲೂ ಯಾವುದೇ ಶುಚಿತ್ವದ ಕ್ರಮಗಳನ್ನು ಕೈಗೊಳ್ಳದೆ ರಸ್ತೆಬದಿ ಸಿಹಿ ತಿನಿಸು ಹಾಗೂ ಇತರೆ ಆಹಾರ ಪದಾರ್ಥಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಆದರೆ, ಆಹಾರ ಸುರಕ್ಷತಾ ಇಲಾಖೆ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿದೆ.

ನಗರದ ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಮೋಹನ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ, ನೌಬಾದ್ ವೃತ್ತ, ಓಲ್ಡ್ ಸಿಟಿ, ಮೈಲೂರ್ ಕ್ರಾಸ್, ಮನ್ನಳ್ಳಿ ರಸ್ತೆ, ಗುಂಪಾ ರಿಂಗ್ ರೋಡ್, ಚಿದ್ರಿ ರಿಂಗ್ರೋಡ್ ಸೇರಿದಂತೆ ಹಲವು ಕಡೆಗಳಲ್ಲಿ ಆಹಾರ ಪದಾರ್ಥಗಳನ್ನು ರಸ್ತೆಯುದ್ದಕ್ಕೂ ಮಾರಾಟ ಮಾಡಲಾಗುತ್ತಿದೆ. ಆದರೆ, ಹೆಚ್ಚಿನವರು ಸ್ವಚ್ಛತೆಗೆ ಒತ್ತು ಕೊಟ್ಟಿಲ್ಲ.

ಈ ರಸ್ತೆಗಳಲೆಲ್ಲಾ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅವುಗಳು ಹೊರಸೂಸುವ ಕಪ್ಪು ಹೊಗೆ, ಗಾಳಿಗೆ ಎದ್ದೇಳುವ ದೂಳೆಲ್ಲ ನೇರವಾಗಿ ಆಹಾರ ಪದಾರ್ಥಗಳ ಮೇಲೆ ಹೋಗಿ ಬೀಳುತ್ತದೆ. ಕೆಲವೇ ಕೆಲವರು ಗಾಜು, ಪ್ಲಾಸ್ಟಿಕ್ ಪರದೆ ಮಾಡಿಕೊಂಡಿದ್ದಾರೆ. ಹೆಚ್ಚಿನವರು ತೆರೆದ ಸ್ಥಿತಿಯಲ್ಲಿಯೇ ಜಿಲೇಬಿ, ಸಮೋಸಾ, ಕಚೋರಿ, ಮಿರ್ಚಿ, ವಡಾ ಪಾವ್, ಮಿಸಳ್, ಪಾನಿಪೂರಿ, ಗೋಬಿ ಮಂಚೂರಿ, ಎಗ್ ರೈಸ್, ಕಿಚಡಿ ಸೇರಿದಂತೆ ಇತರೆ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ.

ನಗರದ ಮಹಾವೀರ ವೃತ್ತದ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಗೆ ಹೊಂದಿಕೊಂಡಿರುವ ಕಾಂಪೌಂಡ್ ಉದ್ದಕ್ಕೂ ತಳ್ಳುಗಾಡಿಗಳಲ್ಲಿ ಜಿಲೇಬಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಇಲ್ಲಿರುವ ಬಹುತೇಕ ವ್ಯಾಪಾರಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ತೆರೆದ ಸ್ಥಿತಿಯಲ್ಲಿಯೇ ಜಿಲೇಬಿ ಇಟ್ಟು ರಾಜಾರೋಷವಾಗಿ ಮಾರಾಟ ಮಾಡುತ್ತಾರೆ. ಅಲ್ಲಿಯೇ ಸಿಗ್ನಲ್ ಇರುವುದರಿಂದ ವಾಹನಗಳು ನಿಂತು ಹೊಗೆ ಸೂಸುತ್ತವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇದೇ ಮಾರ್ಗದಿಂದ ನಿತ್ಯ ಓಡಾಡುತ್ತಾರೆ. ಆದರೆ, ಯಾರೊಬ್ಬರೂ ಕೂಡ ಅದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿಲ್ಲ.

‘ಪ್ರತಿಯೊಬ್ಬರಿಗೂ ವ್ಯಾಪಾರ ವಹಿವಾಟು ನಡೆಸುವ ಹಕ್ಕಿದೆ. ಆದರೆ, ಕನಿಷ್ಠ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಸ್ತೆಬದಿ ತೆರೆದ ಸ್ಥಿತಿಯಲ್ಲಿ ಆಹಾರ ವಸ್ತುಗಳನ್ನು ಇಡುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ಸೇವಿಸುವ ಮುಗ್ಧ ಜನರಿಗೆ ಅನೇಕ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಸುರಕ್ಷತೆಗೆ ಒತ್ತು ಕೊಡಬೇಕು. ಕೊಡದಿದ್ದರೆ ಸಂಬಂಧಿಸಿದ ಇಲಾಖೆಯವರು ಕ್ರಮ ಜರುಗಿಸಬೇಕು. ಆದರೆ, ಎಲ್ಲರೂ ಕಣ್ಮುಚ್ಚಿ ಕುಳಿತಿರುವ ಹಾಗೆ ಕಾಣಿಸುತ್ತಿದೆ’ ಎಂದು ಸ್ಥಳೀಯರಾದ ರಮೇಶ, ವಿನೋದ್ ಟೀಕಿಸಿದ್ದಾರೆ.

ಅಡುಗೆ ಎಣ್ಣೆ ಮೇಲೂ ಅನುಮಾನ

ಬೀದರ್ ನಗರದ ಹಲವು ಕಡೆಗಳಲ್ಲಿ ಅಡುಗೆ ಎಣ್ಣೆ ತಯಾರಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ರಾಸಾಯನಿಕ ಮಿಶ್ರಣ ಮಾಡಿ, ಕಳಪೆ ಗುಣಮಟ್ಟದ ಎಣ್ಣೆ ತಯಾರಿಸಲಾಗುತ್ತಿದೆ ಎಂಬ ಅನುಮಾನ, ದೂರುಗಳಿವೆ.

ಎಲ್ಲೆಲ್ಲಿ ಅಡುಗೆ ಎಣ್ಣೆ ತಯಾರಿಸ ಲಾಗುತ್ತದೆಯೋ ಅದರ ಗುಣಮಟ್ಟ ಪರೀಕ್ಷೆ ಕಾಲಕಾಲಕ್ಕೆ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ಕುರಿತಾಗಿಯೂ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಎರಡ್ಮೂರು ಸಭೆಗಳಲ್ಲಿ ದನಿ ಎತ್ತಿದ್ದಾರೆ. ‘ಅಡುಗೆ ಎಣ್ಣೆಯ ಸ್ಯಾಂಪಲ್ ಕಳಿಸಲಾಗಿದೆ. ವರದಿ ಬಂದಿಲ್ಲ’ ಎಂದು ಅಧಿಕಾರಿಗಳು ಸಿದ್ಧ ಉತ್ತರ ಕೊಟ್ಟು ನುಣುಚಿಕೊಳ್ಳುತ್ತಿದ್ದಾರೆ. ಆದರೆ, ಮನುಷ್ಯರ ದೇಹದೊಳಗೆ ಯಾವ ರೀತಿಯ ಅಡುಗೆ ಎಣ್ಣೆ ಸೇರುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.

ಈ ಸಂಬಂಧ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಅನಿಲ್ ಅವರನ್ನು ‘ಪ್ರಜಾವಾಣಿ’ ಹಲವು ಸಲ ಸಂಪರ್ಕಿಸಿದರೂ ಮಾಹಿತಿಗೆ ಲಭ್ಯರಾಗಲಿಲ್ಲ.

ಶಾಸಕರ ಮಾತಿಗೂ ಇಲ್ಲ ಕಿಮ್ಮತ್ತು

‘ರಸ್ತೆಬದಿ ಆಹಾರ ಮಾರಾಟ ಮಾಡುವವರು ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಶುಚಿತ್ವಕ್ಕೂ ಒತ್ತು ಕೊಡುತ್ತಿಲ್ಲ. ರಸ್ತೆಬದಿ ತೆರೆದಿಟ್ಟು ಸಿಹಿ ತಿನಿಸು, ಆಹಾರ ಮಾರಾಟ ಮಾಡಲಾಗುತ್ತಿದೆ. ಇದೆಲ್ಲ ಮನುಷ್ಯರ ದೇಹದೊಳಗೆ ಹೋದರೆ ಏನಾಗಬಲ್ಲದು. ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆ ಕೊಡದೆ ಸುರಕ್ಷತೆ, ಸ್ವಚ್ಛತೆಗೆ ಒತ್ತು ಕೊಡಲು ಸೂಚನೆ ಕೊಡಬೇಕು. ಯಾರು ನಿಯಮ ಪಾಲಿಸುವುದಿಲ್ಲವೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಹಲವು ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆಯವರ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಇದುವರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕರು ಪ್ರಸ್ತಾಪಿಸಿದ ಸಮಸ್ಯೆ ಹೇಗಿತ್ತೋ ಈಗಲೂ ಹಾಗೆಯೇ ಇದೆ.

‘ಅಧಿವೇಶನದಲ್ಲಿ ಪ್ರಸ್ತಾಪಿಸುವೆ’

‘ರಸ್ತೆ ಬದಿ ಸಿಹಿ ತಿನಿಸು, ಫಾಸ್ಟ್ ಫುಡ್ ಮಾರಾಟ ಮಾಡುವವರು ಸ್ವಚ್ಛತೆ, ಸುರಕ್ಷತೆಗೆ ಒತ್ತು ಕೊಡುತ್ತಿಲ್ಲ. ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದು, ಇದನ್ನು ತಡೆಯಬೇಕೆಂದು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರೂ ಕಿವಿಗೊಡುತ್ತಿಲ್ಲ. ಜಿಲ್ಲಾಧಿಕಾರಿ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ’ ಎಂದು ಡಾ. ಶೈಲೇಂದ್ರ ಕೆ. ಬೆಲ್ದಾಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿಲ್ಲ. ಯಾವುದೇ ಬೀದಿ ಬದಿ ವ್ಯಾಪಾರಿಗಳಿಗೆ ಸಮಸ್ಯೆ ಉಂಟು ಮಾಡದೆ, ಅವರಲ್ಲಿ ಜಾಗೃತಿ ಮೂಡಿಸಬೇಕು. ಕೆಲವು ಕನಿಷ್ಠ ಸುರಕ್ಷತಾ ನಿಯಮ ಪಾಲಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರೆ ಏನೂ ಮಾಡಿಲ್ಲ. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಸರ್ಕಾರದ ಭಯ ಅವರಿಗಿಲ್ಲದಂತೆ ಕಾಣಿಸುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.