ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ವಿಚಾರ ಸಂಕಿರಣ

Last Updated 1 ಏಪ್ರಿಲ್ 2022, 14:49 IST
ಅಕ್ಷರ ಗಾತ್ರ

ಬೀದರ್: ಅಂಬೇಡ್ಕರ್ ಯುವ ಸೇನೆ ವತಿಯಿಂದ ಡಾ. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ ಹಾಗೂ ಚೌಡರ ಕೆರೆ ಪ್ರವೇಶ ದಿನದ ಪ್ರಯುಕ್ತ ಇಲ್ಲಿಯ ಹೊಟೇಲ್ ಸಪ್ನಾ ಇಂಟರ್‍ನ್ಯಾಷನಲ್‍ನಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯ ಕುರಿತು ವಿಚಾರ ಸಂಕಿರಣ ನಡೆಯಿತು.

ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟ ಕುರಿತು ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯ ಪ್ರೊ. ಶಿವಶರಣಪ್ಪ ಹುಗ್ಗೆ ಪಾಟೀಲ, ಡಾ. ಅನಿಲ ತೆಂಗಳಿ, ಉಪನ್ಯಾಸಕ ಹಣಮಂತ ಗೌಡಗಾಂವಕರ್ ಮಾತನಾಡಿದರು.

ಭಂತೆ ಧಮ್ಮ ರಕ್ಷಿತ ಉದ್ಘಾಟಿಸಿದರು. ಅಂಬೇಡ್ಕರ್ ಯುವ ಸೇನೆ ರಾಜ್ಯ ಅಧ್ಯಕ್ಷ ಚಂದ್ರಕಾಂತ ನಿರಾಟೆ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಸದಸ್ಯ ಅನಿಲಕುಮಾರ ಗಂಜಕರ್, ಎಂ.ಡಿ. ನವಾಜ್ ಖಾನ್, ಎಂ.ಡಿ. ಫಿರೋಜ್ ಖಾನ್, ಸುಮಂತ ಕಟ್ಟಿಮನಿ, ಸುರೇಶ ಘಾಂಗ್ರೆ, ಸುರೇಶ ಮೇದಾ, ನಾಗೇಂದ್ರ ಕೆ. ಜವಳಿ, ಪ್ರಭಾವತಿ ಕರಕನಳ್ಳಿ, ಸಂಜೀವಕುಮಾರ ದೊಡ್ಡಮನಿ, ಗೋವಿಂದ ಪೂಜಾರಿ, ವೀರಶೆಟ್ಟಿ ದೀನೆ, ಧರ್ಮರಾಯ ಘಾಂಗ್ರೆ, ರಾಜಕುಮಾರ ಮೂಲಭಾರತಿ ಇದ್ದರು.

ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಗುನ್ನಳ್ಳಿ ಸ್ವಾಗತಿಸಿದರು. ವಿಶ್ವ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT