ಬೀದರ್: ನಗರದ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಸೋಮವಾರ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳ ಪಾರಾಯಣ ಸಮಾರೋಪ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಮೆಹಕರ್–ತಡೋಳಾ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ವ್ಯಕ್ತಿತ್ವ ರೂಪಿಸಿ ರಾಷ್ಟ್ರ ನಿರ್ಮಾಣಕ್ಕೆ ಪ್ರೇರೇಪಿಸುವ ಗುರುಕುಲ ಪ್ರೇರಿತ ಭಗವದ್ಗೀತೆ ಆಧಾರಿತ ಶಿಕ್ಷಣ ದೇಶವನ್ನು ಬಲಿಷ್ಠ, ವಿಕಸಿತ ಮತ್ತು ಆತ್ಮನಿರ್ಭರವಾಗಿಸುತ್ತದೆ’ ಎಂದು ಹೇಳಿದರು.

ಭಗವದ್ಗೀತಾ ಅಭಿಯಾನ ಸಮಿತಿಯ ವತಿಯಿಂದ ನಡೆದ ಪಾರಾಯಣ ಕಾರ್ಯಕ್ರಮದಲ್ಲಿ ನೂರಾರು ಮಾತೆಯರು ಏಕಸ್ವರದಲ್ಲಿ ಎಲ್ಲಾ 700 ಶ್ಲೋಕಗಳನ್ನು ಶ್ರಾವ್ಯವಾಗಿ ಪಠಿಸಿದರು.

ಶ್ಲೋಕೋಚ್ಚಾರಣೆಯ ನಾದದಿಂದ ಸಂಪೂರ್ಣ ಮಂದಿರ ಮತ್ತು ಸುತ್ತಮುತ್ತಲಿನ ವಾತಾವರಣ ಆಧ್ಯಾತ್ಮಿಕತೆಯಿಂದ ತುಂಬಿತು. ಗೀತಾ ಭಟ್, ಜ್ಯೋತಿ ಕುಲಕರ್ಣಿ, ಮಂಜುಳಾ ಕುಲಕರ್ಣಿ, ನಂದಾ ಕುಲಕರ್ಣಿ, ಪ್ರಮೋದಿನಿ ಕುಲಕರ್ಣಿ ಇವರ ನೇತೃತ್ವದ ತಂಡ ಪಾಳಿಪಾಳಿ ಪಾರಾಯಣವನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಭಗವದ್ಗೀತಾ ಸಮಿತಿಯ ಗೌರವಾಧ್ಯಕ್ಷ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಬೀದರ್ನ ಭಗವದ್ಗೀತೆ ಅಭಿಯಾನ ಸಮಿತಿಯು ಗೀತಾ ಪ್ರಚಾರದ ಜೊತೆಗೆ ಶಾಲಾ ಮಕ್ಕಳಲ್ಲೂ ಜ್ಞಾನವರ್ಧನೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.

ರಾಜಕುಮಾರ ಅಗ್ರವಾಲ, ಪ್ರಧಾನ ಕಾರ್ಯದರ್ಶಿ ಉಪೇಂದ್ರ ದೇಶಪಾಂಡೆ, ಸಂಘಟಕರಾದ ರಾಮಕೃಷ್ಣ ಸಾಳೆ, ಪರಮೇಶ್ವರ ಭಟ್, ಪ್ರಮುಖರಾದ ಪ್ರಭಾಕರ ಮೈಲಾಪೂರೆ, ಹಣಮಯ್ಯ, ಡಾ. ಚಂದ್ರಕಾಂತ ಕುಲಕರ್ಣಿ, ಬ್ರಿಜ್ಕಿಶೋರ್ ಮಾಲಾನಿ, ಸುನೀಲ ಗೌಳಿ, ಸಂತೋಷ ಜೋಷಿ, ನಗರಸಭೆ ಮಾಜಿ ಸದಸ್ಯರಾದ ಪ್ರಸನ್ನಲಕ್ಷ್ಮಿ ದೇಶಪಾಂಡೆ, ರೇಖಾ ಕುಲಕರ್ಣಿ, ಮಂಗಲಾ ಭಾಗವತ್ ಹಾಗೂ ಗುರುರಾಜ ಸೇವಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.