ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ಗುಡ್‌ ಫ್ರೈಡೇ: ಕ್ರೈಸ್ತ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ

Published 29 ಮಾರ್ಚ್ 2024, 15:19 IST
Last Updated 29 ಮಾರ್ಚ್ 2024, 15:19 IST
ಅಕ್ಷರ ಗಾತ್ರ

ಹುಲಸೂರ: ಪಟ್ಟಣದಲ್ಲಿ ಏಸು ಶಿಲುಬೆಗೇರಿದ ದಿನವನ್ನು ಗುಡ್ ಫ್ರೈಡೆ ಆಗಿ ಸಂತ ಅಂಥೋಣಿ ಚರ್ಚ್‌, ಮುಚಳಂಬದ ಶ್ರಮಿಕ್ ಜೋಸೆಫ್ ಚರ್ಚ್‍ಗಳಲ್ಲಿ ಕ್ರೈಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹಲಬರ್ಗದ ಅನುಗೃಹ ಫಾದರ್ ಲಾರೆನ್ಸ್ ಮಾತನಾಡಿ, ‘ಗುಡ್‌ ಫ್ರೈಡೇ ಕೇವಲ ಒಂದು ದಿನದ ಆಚರಣೆಯಲ್ಲ. ಈ ಸಮಯದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ. ಮೋಜಿನ ಬದುಕು ನಡೆಸುವಂತಿಲ್ಲ. ಶುಭ ಸಮಾರಂಭಗಳೂ ನಡೆಯುವುದಿಲ್ಲ. ಈಸ್ಟರ್‌ ದಿನದಂದು ತಪಸ್ಸಿನ ಕಾಲಕ್ಕೆ ವಿದಾಯ ಹೇಳಲಾಗುತ್ತದೆ. ಈಸ್ಟರ್ ಭಾನುವಾರ ಏಸುವಿನ ಪುನರುತ್ಥಾನ ಕೊಂಡಾಡುವ ಸಂಭ್ರಮದ ದಿನವಾಗಿದೆ. ಶುಭ ಶುಕ್ರವಾರದ ದಿನ ಚರ್ಚ್‌ಗಳಲ್ಲಿ ಗಂಟೆಗಳ ಧ್ವನಿ ಇರುವುದಿಲ್ಲ. ಬಲಿ ಪೂಜೆಯ ಸಂಭ್ರಮವೂ ನಡೆಯುವುದಿಲ್ಲ ಎಂದರು.

ಸಂತ ಅಂಥೋಣಿ ಚರ್ಚ್‌ನಲ್ಲಿ ಏಸುಕ್ರಿಸ್ತರ ಬಂಧನವಾಗುವುದರಿಂದ ಹಿಡಿದು ಶಿಲುಬೆ ಮೇಲೆ ಮರಣ ಹೊಂದುವ ತನಕದ ವಿವಿಧ ಘಟನೆಗಳನ್ನು ನೆನಪಿಸುವ ಪ್ರದರ್ಶನದ ಮೂಲಕ ಜನರಿಗೆ ಏಸು ಕ್ರಿಸ್ತನ ಕುರಿತ ಸಂದೇಶ ಸಾರಲಾಯಿತು. ಗುಡ್‌ಫ್ರೈಡೆ ಪ್ರಯುಕ್ತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ ವೆ ಆಫ್‌ ದಿ ಕ್ರಾಸ್‌), ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳು ನಡೆದವು.

ಫಾದರ್ ಆರೋಗ್ಯದಾಸ, ವೈಜಿನಾಥ ಸೂರ್ಯವಂಶಿ, ದತ್ತು ಸೂರ್ಯವಂಶಿ, ಗೊರಖನಾಥ ಗಾಯಕವಾಡ, ಪುಣ್ಯವತಿ, ಕವಿತಾ ಸೂರ್ಯವಂಶಿ, ವಿದ್ಯಾ ಜ್ಯೋತಿ ಶಾಲೆ ಬಾಲಕಿಯರು ಸೇರಿ ಕ್ರೈಸ್ತ ಸಮುದಾಯದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT