ಮಂಗಳವಾರ, ಏಪ್ರಿಲ್ 13, 2021
30 °C
113 ಅಭ್ಯರ್ಥಿಗಳ ಸ್ಪರ್ಧೆ

ಕಮಲನಗರ: ರಂಗೇರುತ್ತಿದೆ ಚುನಾವಣಾ ಕಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲನಗರ: ತಾಲ್ಲೂಕಿನಲ್ಲಿ ನಡೆಯಲಿರುವ ಎರಡನೇ ಹಂತದ ಕಮಲನಗರ ಗ್ರಾಮ ಪಂಚಾಯಿತಿ ಚುನಾವಣೆ ಕಣದಲ್ಲಿ ಒಟ್ಟು 31 ಸ್ಥಾನಕ್ಕೆ 113 ಮಂದಿ ಉಳಿದಿದ್ದಾರೆ.

ಶನಿವಾರ ನಾಮಪತ್ರ ಹಿಂಪಡೆಯುವ ಕೊನೆದಿನ ಸಂದರ್ಭದಲ್ಲಿ 3 ನಾಮಪತ್ರ ತಿರಸ್ಕರಿಸಲಾಗಿದೆ. ಮುರ್ಗ(ಕೆ), ಕಮಲನಗರ, ಬಾಲೂರು ಸೇರಿ ಮೂರು ಗ್ರಾಮದ 10 ವಾರ್ಡ್‍ಗಳಲ್ಲಿ ಸಲ್ಲಿಸಿದ 125 ನಾಮಪತ್ರಗಳಲ್ಲಿ ಅಂತಿಮವಾಗಿ 113 ಜನ ಚುನಾವಣೆ ಅಖಾಡದಲ್ಲಿ ಇದ್ದಾರೆ ಎಂದು ಚುನಾವಣೆ ಅಧಿಕಾರಿ ಸಂತೋಷ ಶೆಳೆಕೆ ತಿಳಿಸಿದ್ದಾರೆ.

ಎರಡನೇ ಹಂತದ ಚುನಾವಣೆ ನಡೆಯಲಿರುವ ಕಮಲನಗರ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ 281 ಸ್ಥಾನಕ್ಕೆ ನಾಳೆಯಿಂದ ಒಟ್ಟಾರೆ ತಾಲ್ಲೂಕಿನಲ್ಲಿ ಚುನಾವಣೆ ಪ್ರಚಾರದ ಕಾವು ಸದ್ದಿಲ್ಲದೆ ಏರುತ್ತಿದೆ.

ಕಮಲನಗರ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ 31 ಸ್ಥಾನ ಹೊಂದಿರುವ ಅತಿ ಹೆಚ್ಚು ಅಭ್ಯರ್ಥಿಗಳಿರುವ ತಾಲ್ಲೂಕಿನ ಏಕೈಕ ಗ್ರಾಮ ಪಂಚಾಯಿತಿ ಕಮಲನಗರ ಆದರೆ, ಅತ್ಯಂತ ಕಡಿಮೆ 7 ಅಭ್ಯರ್ಥಿಗಳ ಸ್ಥಾನ ಹೊಂದಿರುವ ಡಿಗ್ಗಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕೂಡ ನಾನೇನು ಕಮ್ಮಿಯಿಲ್ಲ ಎಂದು ಚುನಾವಣೆ ಕಣ ರಂಗೇರುತ್ತಿದೆ.

ತಾಲ್ಲೂಕಿನ ಅತ್ಯಂತ ಚಿಕ್ಕ ಗ್ರಾಮ ಪಂಚಾಯಿತಿ ಎಂದು ಹೆಗ್ಗಳಿಕೆಗೆ ಪಾತ್ರವಾದ ಡಿಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚ್ಯಾಂಡೆಶ್ವರ, ಡಿಗ್ಗಿ, ರಾಂಪೂರು ಮೂರು ಗ್ರಾಮ ಸೇರಿ ಒಟ್ಟು 28 ನಾಮಪತ್ರ ಸ್ಲಲಿಸಲಾಗಿತ್ತು. ಶನಿವಾರ ಹಿಂಪಡೆಯುವ ಕೊನೆ ದಿನವಾದ ಪ್ರಯುಕ್ತ ಒಟ್ಟು 6 ಮಂದಿ ನಾಮಪತ್ರ ಹಿಂಪಡೆದಿದ್ದಾರೆ, ರಾಂಪೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆ ಅಭ್ಯರ್ಥಿ ಒಬ್ಬರನ್ನು ಅವಿರೋಧ ಆಯ್ಕೆಯಾಗಿದ್ದಾರೆ. ಅಂತಿಮ ಕಣದಲ್ಲಿ 21 ಜನ ಚುನಾವಣೆ ಅಖಾಡದಲ್ಲಿ ಇದ್ದಾರೆ ಎಂದು ಚುನಾವಣೆ ಅಧಿಕಾರಿ ಮಧುಕರ ಮಾಟೆ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು