ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯಕ್ಕೆ ಸೊಳ್ಳೆ ಮೂಲ

ಡಿಎಂಒ ಡಾ.ಸಂಜೀವಕುಮಾರ ಪಾಟೀಲ ಹೇಳಿಕೆ
Last Updated 4 ಆಗಸ್ಟ್ 2021, 5:39 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಡೆಂಗಿ, ಮಲೇರಿಯಾ, ಚಿಕೂನ್ ಗುನ್ಯಾ ರೋಗಗಳು ಹರಡಲು ಸೊಳ್ಳೆಗಳು ಕಾರಣವಾಗಿವೆ. ಆದ್ದರಿಂದ ಅವುಗಳಿಂದ ರಕ್ಷಣೆ ಪಡೆದುಕೊಳ್ಳುವುದು ಉತ್ತಮ’ ಎಂದು ಆರೋಗ್ಯ ಇಲಾಖೆ ಡಿಎಂಒ ಡಾ.ಸಂಜೀವಕುಮಾರ ಪಾಟೀಲ ಹೇಳಿದ್ದಾರೆ.

ತಾಲ್ಲೂಕಿನ ಜಾಪೂರವಾಡಿಯಲ್ಲಿ ಆರೋಗ್ಯ ಇಲಾಖೆಯಿಂದ ಸೋಮವಾರ ನಡೆದ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೊಳ್ಳೆಗಳನ್ನು ನಿಯಂತ್ರಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿನ ಖಾಲಿ ಡ್ರಮ್, ಪಾತ್ರೆ, ಘನತ್ಯಾಜ್ಯ, ಟೈರ್ ಮುಂತಾದವುಗಳಲ್ಲಿ ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು. ಚರಂಡಿ ಸ್ವಚ್ಛತೆ ಕೈಗೊಳ್ಳಬೇಕು. ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಇಲ್ಲವೆ ಸೊಳ್ಳೆ ನಾಶಕ ಉಪಯೋಗಿಸಬೇಕು’ ಎಂದರು.

‘ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸ್ವಚ್ಛ ಮತ್ತು ಸುಂದರ ಪರಿಸರದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಬಾಬುರಾವ್ ಪ್ರಿಯಾ, ಕಮಲಾಕರ ಹಲಗೆ, ರಾಜಶೇಖರ ತಂಬಾಕೆ, ವೈದ್ಯಾಧಿಕಾರಿ ಡಾ.ಅಜಯ ಮತ್ತಣ್ಣ, ಮಹೇಶ ಲೋಣಿ, ಸೂರ್ಯಕಾಂತ ಮುಳೆ, ಶಾಂತವಿಜಯ ಪಾಟೀಲ, ಉದಯಕುಮಾರ ಮುಳೆ, ಕಾರ್ತಿಕ ಸ್ವಾಮಿ, ದಿಲೀಪ ಗಿರಗಂಟೆ, ಗುರಣ್ಣ ಬಿರಾದಾರ, ರಾಚಣ್ಣ ಹಂಡಗೆ, ಅಂಬಾರಾಯ ಮೇತ್ರೆ ಪಾಲ್ಗೊಂಡಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT