ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ನಲ್ಲಿ ಆರ್ಭಟಿಸಿದ ಮಳೆರಾಯ

Published 16 ಆಗಸ್ಟ್ 2024, 14:04 IST
Last Updated 16 ಆಗಸ್ಟ್ 2024, 14:04 IST
ಅಕ್ಷರ ಗಾತ್ರ

ಬೀದರ್‌: ಎರಡನೇ ದಿನವೂ ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಜೋರು ಮಳೆಯಾಗಿದೆ.

ನಗರದ ಬಸವೇಶ್ವರ ವೃತ್ತ, ನಯಕಮಾನ್‌, ಸಿದ್ದಿತಾಲೀಮ್‌, ಚೌಬಾರ, ಕೋಟೆ ಪ್ರದೇಶ, ವಿದ್ಯಾನಗರ, ಹಾರೂರಗೇರಿಯಲ್ಲಿ ಶುಕ್ರವಾರ ಬಿರುಸಿನ ಮಳೆಯಾಗಿದೆ. ಇದರ ಪರಿಣಾಮ ಮುಖ್ಯ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ನಗರದ ಬಸವೇಶ್ವರ ವೃತ್ತ ಸಮೀಪದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನೊಂದಿಗೆ ಚರಂಡಿ ಹೊಲಸು ಸೇರಿಕೊಂಡು ರಸ್ತೆ ಮೇಲೆ ಹರಿಯಿತು. ಇದರಿಂದ ಇಡೀ ಪ್ರದೇಶದಲ್ಲಿ ದುರ್ಗಂಧಕ್ಕೆ ಕಾರಣವಾಯಿತು. ವಾಹನಗಳ ಓಡಾಟಕ್ಕೂ ತೊಂದರೆಯಾಯಿತು.

ನಗರ ಹೊರವಲಯದ ಕುಂಬಾರವಾಡ, ಗುಂಪಾ, ಮೈಲೂರನಲ್ಲಿ ಸಾಧಾರಣ ಮಳೆಯಾಯಿತು. ದಿನವಿಡೀ ದಟ್ಟ ಕಾರ್ಮೋಡ ಕವಿದು ವಾತಾವರಣ ಸಂಪೂರ್ಣ ತಂಪಾಗಿತ್ತು.

ಜಿಲ್ಲೆಯ ಬಸವಕಲ್ಯಾಣ, ಔರಾದ್‌, ಭಾಲ್ಕಿ, ಹುಲಸೂರನಲ್ಲೂ ಮಳೆಯಾಗಿರುವುದು ವರದಿಯಾಗಿದೆ. ಗುರುವಾರ ಸಹ ಜಿಲ್ಲೆಯ ಹಲವು ಕಡೆಗಳಲ್ಲಿ ವರ್ಷಧಾರೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT