ಹುಮನಾಬಾದ್: ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ದೇವಾಲಯಗಳಲ್ಲಿ ಹುಮನಾಬಾದ್ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಸ್ಥಾನವು ಒಂದಾಗಿದೆ. ಈ ದೇವಸ್ಥಾನ ಧಾರ್ಮಿಕ, ಐತಿಹಾಸಿಕ ಕ್ಷೇತ್ರವಾಗಿ ಭಕ್ತರನ್ನು ತನ್ನಡೆಗೆ ಸೆಳೆಯುತ್ತದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರ ಆರಾಧ್ಯ ದೈವ ಶ್ರೀ ವೀರಭದ್ರೇಶ್ವೆರನಾಗಿದ್ದಾನೆ.

ವೀರಭದ್ರೇಶ್ವರನ ದರ್ಶನ ಪಡೆಯಲು ದಿನಾಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಜನವರಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರ ದಂಡು ಇಲ್ಲಿ ಕಂಡುಬರುತ್ತದೆ. ಜಯ ಸಿಂಹ ಪುರ ಎಂಬ ಪ್ರಾಚೀನ ಹೆಸರು ಹೊಂದಿರುವ ಹುಮನಾಬಾದ್ ಪಟ್ಟಣ ದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯ ಸಾಂಸ್ಕೃತಿಕ ರೂಪಗಳಲ್ಲಿ ಒಂದಾಗಿದೆ.

ಈ ದೇವಸ್ಥಾನವನ್ನು ಜಯಸಿಂಹ ನಿರ್ಮಿಸಿದ ಎಂದು ಹೇಳುತ್ತಿರುವುದು ಒಂದೆಡೆಯಾದರೆ, 1725ರಲ್ಲಿ ರಾಜ ರಾಮಚಂದ್ರ ಜಾಧವ್ ನಿರ್ಮಿಸಿದ ಎಂಬುದು ಇನ್ನೊಂದೆಡೆ. ಚಂದ್ರಸೇನ ರಾಜನ ಕಾಲದಲ್ಲಿ ಇದು ಹೊಸದಾಗಿ ನಿರ್ಮಾಣಗೊಂಡಿರಬಹುದು ಎಂದೂ ಹೇಳಲಾಗುತ್ತದೆ.

ದೇವಾಲಯದ ಗರ್ಭಗುಡಿ ರಚನೆ ಭಾರತೀಯ ವಾಸ್ತುಶಿಲ್ಪದ ಹಳೆ ಮಾದರಿಯಲ್ಲಿದ್ದು, ತ್ರಿಕೂಟ ಗರ್ಭಗುಡಿಗಳನ್ನು ಹೊಂದಿದೆ. ಮೇಲ್ಭಾಗದಲ್ಲಿ ಒಂದೇ ಶಿಖರವಿರು ವುದು ಕುತೂಹಲದ ಸಂಗತಿ. ಗರ್ಭಗುಡಿಗಳ ಮುಂದೆ ಮಧ್ಯಮ ಗಾತ್ರದ ಸುಕನಾಸಿಯಿದೆ. ಇದರೆದುರು 16 ಕಂಬಗಳ ಮಂಟಪವಿದ್ದು, ನಡುವೆ ನಂದಿ ವಿಗ್ರಹವಿದೆ.

ಇದರ ಮುಂದೆ ನಾಲ್ಕೈದು ದಶಕಗಳ ಹಿಂದೆ ನಿರ್ಮಿತವಾದ 16 ಕಬ್ಬಿಣ ಕಂಬಗಳ ಭವ್ಯ ಮಂಟಪ ಇದೆ. ದೇವಾಲಯದ ಮುಖ್ಯ ದ್ವಾರ ಪೂರ್ವ ದಿಕ್ಕಿಗೆ ಅಭಿಮುಖವಾಗಿದೆ. ಎದುರಿನ ಗರ್ಭಗುಡಿಯಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ದೂರದಿಂದಲೇ ಭಕ್ತರನ್ನು ಕಾಣುವಂತೆ ಪ್ರತಿಷ್ಠಾಪಿತಗೊಂಡಿದೆ. ಅದರ ಎಡ ಗರ್ಭಗುಡಿಯಲ್ಲಿ ವೀರಭದ್ರ ಕಾಳಿ, ಬಲಭಾಗದಲ್ಲಿ ಜಯಶಂಕರ ಇದ್ದಾರೆ.

ದೇವಾಲಯಕ್ಕೆ ಎರಡು ಭವ್ಯ ಮಹಾದ್ವಾರಗಳಿದ್ದು, ಶಿಖರದ ಸುತ್ತಲೂ ಹಲವು ಪೌರಾಣಿಕ ಸನ್ನಿವೇಶ ಗಳನ್ನು ಮೂರ್ತಿಗಳ ರೂಪದಲ್ಲಿ ಕೆತ್ತಲಾಗಿದೆ. ಗೋಪುರದ ಮೇಲೆ ಕಳಸ, ಮೂಲೆಗಳಲ್ಲಿ ನಂದಿಯನ್ನು ಸ್ಥಾಪಿಸಿ, ಸುತ್ತಲೂ ಭೋಜನದ ಸಾಲುಗಳ ಚಿತ್ರ ನೋಡುವಂತಿದೆ. ದೇವಸ್ಥಾನ ಮಂಟಪದಲ್ಲಿ ಒಂಬತ್ತು ವಾದ್ಯಗಳ ಸೇವೆಯಿರುವುದು ಗಮನಾರ್ಹ.

ಪೂರ್ವ ದಿಕ್ಕಿನ ಮಹಾದ್ವಾರಕ್ಕೆ ಹೊಂದಿಕೊಂಡ ಎರಡು ಮಾಲುಗಂಬಗಳಿದ್ದು, ಅದರಲ್ಲಿ ಗುಡಿ ಪ್ರವೇಶದ ಎಡಗಡೆ ಕಂಬದ ತುದಿ ಭಾಗ ಹಿಡಿದರೆ ಅಲುಗಾಡುತ್ತಿರುವ ತಂತ್ರಗಾರಿಕೆ ಆಶ್ಚರ್ಯಕರ ಹಾಗೂ ಅದ್ಭುತವಾಗಿದೆ. ನವ ತಂತ್ರಜ್ಞಾನವುಳ್ಳ ಅನೇಕ ಎಂಜಿನಿಯರ್ಗಳನ್ನು ಇದು ದಿಗ್ಮೂಢಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.