ಹುಮನಾಬಾದ್: ಪಟ್ಟಣದ ಹೊರವಲಯದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಸಂಪರ್ಕ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಸತಿ ನಿಲಯದಲ್ಲಿ 32ಕ್ಕು ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಈ ವಸತಿ ನಿಲಯದ ಎದುರುಗಡೆ ದೊಡ್ಡ ಹಳ್ಳ ಹರಿಯುತ್ತಿದ್ದು, ಈ ಹಳ್ಳದಲ್ಲಿ ಪಟ್ಟಣದ ನೈರ್ಮಲ್ಯ ಸೇರಿಕೊಂಡು ಗಬ್ಬುನಾರುತ್ತಿದೆ. ಮಳೆ ಬಂದರಂತೂ ಈ ಹಳ್ಳ ಉಕ್ಕಿ ಹರಿಯಲಿದ್ದು, ವಿದ್ಯಾರ್ಥಿಗಳು ಈ ದುರ್ನಾತದ ನೀರನ್ನೇ ತುಳಿದು ಒಳ ಬರುವ ಅನಿವಾರ್ಯತೆ ಎದುರಾಗಿದೆ. ಇನ್ನು ಸೊಳ್ಳೆ, ಹಂದಿಗಳ ಕಾಟ ಸೇರಿದಂತೆ ವಿಷ ಜಂತುಗಳು ಸಹ ಆಗಾಗ ವಸತಿ ನಿಲಯಕ್ಕೆ ಬರುತ್ತಿದ್ದ ಕಾರಣ ಜೀವ ಭಯದಲ್ಲಿ ನೆಲೆಸುವಂತೆ ಆಗಿದೆ ಎನ್ನಾತ್ತಾರೆ ವಿದ್ಯಾರ್ಥಿಗಳು.

ಮಳೆ ಬಂದರೆ ವಸತಿ ನಿಲಯದ ಕೆಲವು ಕೊಠಡಿಗಳು ಸೋರುತ್ತಿವೆ. ಗೋಡೆಗಳು ಶಿಥಿಲ ವ್ಯವಸ್ಥೆಗೆ ತಲುಪಿವೆ. ಮಳೆಗಾಲದಲ್ಲಿ ವಸತಿ ನಿಲಯದ ಸುತ್ತಮುತ್ತಲಿನ ಈ ಪ್ರದೇಶ ಸಂಪೂರ್ಣ ಜಲಾವೃತಗೊಂಡು ಓಡಾಡಲು ಸಮಸ್ಯೆ ಉಂಟಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ವಸತಿ ನಿಲಯಕ್ಕೆ ಸುಸಜ್ಜಿತ ಕಾಂಪೌಂಡ್ ಇದ್ದರೂ ಅಕ್ಕಪಕ್ಕದಲ್ಲಿ ಗಿಡ ಗಂಟಿಗಳಿಂದಾಗಿ ಹುಳ ಜಂತುಗಳ ಭಯ ಕಾಡುವಂತೆ ಮಾಡಿದೆ. ಪಟ್ಟಣದ ಹೊರವಲಯದಲ್ಲಿರುವ ಈ ವಸತಿ ನಿಲಯದ ಸ್ಥಳ ನಿರ್ಜನ ಪ್ರದೇಶದಂತೆ ಇದೆ. ಹೀಗಾಗಿ ವಸತಿ ನಿಲಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಬೀದಿ ದೀಪ ಹಾಗೂ ಸರಿಯಾದ ರಸ್ತೆ ಇಲ್ಲದಿರುವುದು ಮತ್ತಷ್ಟು ಭಯಕ್ಕೆ ಕಾರಣವಾಗಿದೆ. ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ದೀಪಗಳ ಅಳವಡಿಕೆ ಮಾಡಬೇಕು ಎಂಬುದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಒತ್ತಾಯವಾಗಿದೆ.

ವಿದ್ಯಾರ್ಥಿಗಳ ಮನವಿ: ‘ವಸತಿ ನಿಲಯದಲ್ಲಿ ಕೆಲವು ಶೌಚಾಲಯಗಳು ಕೆಟ್ಟು ಹೋಗಿವೆ. ನಿಲಯದ ಕೊಠಡಿಗಳು ಸೋರುತ್ತಿವೆ ಇವುಗಳನ್ನು ರಿಪೇರಿ ಮಾಡಿಸಬೇಕು. ನಮಗೆ ಬಟ್ಟೆ ಶುಚಿಗೊಳಿಸುವ ಕಟ್ಟೆಗಳನ್ನು ನಿರ್ಮಿಸಬೇಕು ಮತ್ತು 10 ಕಂಪ್ಯೂಟರ್ ಗಳನ್ನು ನೀಡಬೇಕು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ರಸ್ತೆ ಸಮಸ್ಯೆ ಇದೆ. ಮಳೆಗಾಲ ಬಂದರೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ರಸ್ತೆ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ
ಶಿವಕುಮಾರ್ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ

ವಸತಿ ನಿಲಯಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಬೇಕು. ಈಗಿನ ಕಚ್ಚಾ ರಸ್ತೆ ಮಳೆ ಬಂದಾಗ ಹಳ್ಳದಂತೆ ಮಳೆ ನೀರು ಸಂಗ್ರಹಗೊಂಡು ಓಡಾಡಲು ಆಗದಂತೆ ಪರಿಸ್ಥಿತಿ ಇದೆ
ನಿಸಾರೋದ್ದಿನ್ ಬಾಂಗಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.