ಸೇತುವೆ ನಿರ್ಮಾಣಕ್ಕೆ ಒತ್ತಾಯ
ಘೋಲ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಹಳ್ಳಗಳು ಬರುತ್ತೇವೆ. ಸ್ವಲ್ಪ ಮಳೆಯಾದರೂ ಹಳ್ಳಗಳು ತುಂಬಿ ಹರಿಯುತ್ತವೆ. ‘ನಾವು ಹುಟ್ಟಿನಿಂದ ಅಲ್ಲ. ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ ಮಳೆಯಾದರೆ ದಾರಿ ಕೆಸರು ಗದ್ದೆಯಂತಾಗುತ್ತದೆ. ಹಳ್ಳ ತುಂಬಿ ಹರಿದರೆ ದಾಟಿ ಬೇರೆಡೆ ಹೋಗಲಾರದಂಥ ಪರಿಸ್ಥಿತಿ. ಈ ಹಾಣಾದಿಯಲ್ಲಿ ಬೈಕ್ ಓಡಿಸಲು ಆಗಲ್ಲ. ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ನಡೆಯಬೇಕು. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಬೇಕಾದರೆ ಮಂಚ ಅಥವಾ ಭುಜದ ಮೇಲೆ ಹೊತ್ತುಕೊಂಡು ಹೋಗಬೇಕು. ಕೂಡಲೇ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.