ಹುಲಸೂರ: ಅಂತರ ರಾಜ್ಯ ಜಾನುವಾರು ಕಳ್ಳರನ್ನು ಮೆಹಕರ ಪೊಲೀಸರು ಬಂಧಿಸಿದ್ದು, ಅವರಿಂದ ₹ 3 ಲಕ್ಷ ಬೆಲೆ ಬಾಳುವ ಎರಡೂ ಎಮ್ಮೆ ಮತ್ತು ಕೃತ್ಯಕ್ಕೆ ಬಳಸಿದ್ದ ₹ 4 ಲಕ್ಷ ಬೆಲೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೊಂಗಳಿ ಗ್ರಾಮದ ರೈತರೊಬ್ಬರ ದನದ ಕೊಟ್ಟಿಯಲ್ಲಿನ ಮೂರ್ರಾ ಜಾತಿಯ ₹ 3 ಲಕ್ಷ ಬೆಲೆ ಬಾಳುವ ಎರಡೂ ಎಮ್ಮೆಗಳು ಕಳುವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಜುಲೈ 28 ರಂದು ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ ಶಿವಾನಂದ ಪಾವಡಶೆಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಗುರುಪಾದ ಬಿರಾದಾರ, ಪಿಎಸ್ಐಗಳಾದ ಶಿವಕುಮಾರ ಬಳತೆ ,ಮಾನಿಕಪ್ಪ ಹಲ್ಮಡಗೆ, ಸಿಬ್ಬಂದಿ ಶ್ರೀಶೈಲ ಗಿರಿ, ಧನರಾಜ ಹಾಗೂ ಮಹೇಶ ಅವರ ತಂಡ ಬುಧವಾರ ಆರೋಪಿಗಳನ್ನು ಬಂಧಿಸಿದೆ.

‘ಆರೋಪಿಗಳು ಹಳ್ಳಿಗಳಲ್ಲಿ ತಿರುಗಾಡಿ, ರಾತ್ರಿ ವೇಳೆ ದನಗಳನ್ನು ಕಳವು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು’ ಬಂಧಿತ ಕಳ್ಳರಿಂದ ಜಾನುವಾರು ಮತ್ತು ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಬಂದಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.