‘ತಾಯಿ ಹೆಸರಿನಲ್ಲೊಂದು ಗಿಡ ಪ್ರೇರಣೆ’
‘ಏಕ್ ಪೇಡ್ ಮಾ ಕೆ ನಾಮ್ (ತಾಯಿ ಹೆಸರಿನಲ್ಲೊಂದು ಸಸಿ ನಾಟಿ) ಎಂಬ ಪ್ರಧಾನಿ ಅವರ ಕರೆಯ ಪ್ರಯುಕ್ತ ಮಾತೆ ಕರುಣಾದೇವಿ ಗೌರವಾರ್ಥ ಕರ್ನಾಟಕ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಂದಿರ ಮಠ ಶಾಲಾ-ಕಾಲೇಜು ಆವರಣ ಸಾರ್ವಜನಿಕ ಸ್ಥಳಗಳಲ್ಲಿ ಬಿಲ್ವಪತ್ರೆ ಸೇರಿ ವಿವಿಧ ಸಸಿ ನೆಡಲಾಗುವುದು’ ಎಂದು ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಶಿವಯ್ಯ ಸ್ವಾಮಿ ತಿಳಿಸಿದರು.