ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಇಇ ಮೇನ್ಸ್: ಉತ್ತಮ ಫಲಿತಾಂಶ

Published : 14 ಫೆಬ್ರುವರಿ 2024, 15:52 IST
Last Updated : 14 ಫೆಬ್ರುವರಿ 2024, 15:52 IST
ಫಾಲೋ ಮಾಡಿ
Comments

ಜನವಾಡ(ಬೀದರ್ ತಾಲ್ಲೂಕು): ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಗೋರನಳ್ಳಿ ಸಮೀಪದ ಶರಣಬಸವೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದ್ದಾರೆ.

ಕೇದಾರನಾಥ ಸೂರ್ಯಕಾಂತ 90.12 ಪರ್ಸಂಟೈಲ್‌, ಅಕ್ಷತ್ ಎ. ಕುಶನೂರ 88.99, ಪ್ರಜ್ವಲ್ ಹಣಮಂತ 82.60, ಹರ್ಷಿತ್ ತಿರಮಲ್ 79.43, ಪ್ರಶಾಂತ ಜಗನ್ನಾಥ 72.61, ನಿಖಿಲ್ ಪ್ರಭು 66.43 ಹಾಗೂ ಶ್ರದ್ಧಾ ದಶರಥ  65.28 ಅಂಕ ಪಡೆದಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಸತೀಶ ಪ್ರತಾಪುರ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ, ಚೇರ್‌ಪರ್ಸನ್‌ ದಾಕ್ಷಾಯಿಣಿ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT