ಗಣಪತಿ ಕುರನ್ನಳೆ
ಕಮಲನಗರ: ತಾಲ್ಲೂಕಿನ ದಾಬಕಾ, ಠಾಣಾಕುಶನೂರ, ಹೋಬಳಿ ವ್ಯಾಪ್ತಿಯ ಹಳ್ಳಿಗಳ ರೈತರು ಹಿಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ.
ಪ್ರತಿ ವರ್ಷ ದಸರಾ ಸಮಯದಲ್ಲಿ ಕಡಲೆ, ಕುಸುಬಿ ಸೇರಿದಂತೆ ಇನ್ನಿತರ ಬೆಳೆಗಳು ಬೆಳೆದು ನಿಲ್ಲುತ್ತಿದ್ದವು. ಆಗಾಗ ಬೀಳುತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಇದೆ. ಕೆಲ ರೈತರು ಬೀತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಬಿಳಿಜೋಳ, ಕಡಲೆ, ಗೋಧಿ, ಕುಸುಬಿ ಹಿಂಗಾರಿನ ಪ್ರಮುಖ ಬೆಳೆಗಳ ಬಿತ್ತನೆಗೆ ಅಣಿಯಾಗಿದ್ದಾರೆ. ವಾಣಿಜ್ಯ ಬೆಳೆಯಾದ ಕಡಲೆ ಬೆಳೆಯನ್ನು ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಈಗಾಗಲೇ ರೈತರು ಹಿಂಗಾರು ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಮಡಿದ್ದಾರೆ.
‘ಮುಂದಿನ ಒಂದು ವಾರ ಮಳೆ ಬಾರದಿದ್ದರೆ ಹಿಂಗಾರು ಬಿತ್ತನೆ ಮುಗಿಯಲಿದೆ’ ಎನ್ನುತ್ತಾರೆ ಮದನೂರಿನ ರೈತ ಚಂದ್ರಪ್ಪ್ ಭವರಾ.
‘ಅಧಿಕಾರಿಗಳ ಆದೇಶದಂತೆ ಸರದಿ ಪ್ರಕಾರ ಎಲ್ಲ ರೈತರು ತಮ್ಮ ತಮ್ಮ ಗ್ರಾಮಗಳ ಸರದಿಯಂತೆ ನಿಯಮದ ಪ್ರಕಾರ ಬೀಜ, ರಸಗೊಬ್ಬರ ಖರೀದಿಸಬೇಕು. ಒಂದು ವೇಳೆ ಬೀಜ, ರಸಗೊಬ್ಬರದ ಕೊರತೆ ಸಾಧ್ಯತೆ ಕಂಡುಬಂದರೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಗ್ರಾ.ಪಂ ಅಧಕ್ಷೆ ಸುಶಿಲಾ ಮಹೇಶ ಸಜ್ಜನ ತಿಳಿಸಿದರು.
ಸರ್ಕಾರದಿಂದ ಹಿಂಗಾರು ಕಡಲೆ ಬೀಜ 1400 ಕ್ವಿಂಟಾಲ್ ಗೋಧಿ 750 ಕ್ವಿಂಟಾಲ್ ಸೇರಿ ರಸಗೊಬ್ಬರದ ದಾಸ್ತಾನು ಇದೆ. ಹಿಂಗಾರು ಬಿತ್ತನೆಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಿಕೊಡುತ್ತೆವೆವೈಜನಾಥ ಬಿರಾದಾರ ರೈತ ಸಂಪರ್ಕ ಅಧಿಕಾರಿ ಕಮಲನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.