ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ ಕ್ಷೇತ್ರದ ಸ್ಥಿತಿಗತಿ: ಕಾಂಗ್ರೆಸ್ ಭದ್ರ ಕೋಟೆ ಛಿದ್ರಗೊಳಿಸಲು ಬಿಜೆಪಿ ಪಣ

ಭಾಲ್ಕಿ ವಿಧಾನಸಭಾ ಕ್ಷೇತ್ರದ ಸ್ಥಿತಿ ಗತಿ
Last Updated 14 ಫೆಬ್ರವರಿ 2023, 1:45 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಈಶ್ವರ ಖಂಡ್ರೆ ಅವರದ್ದು ಅತಿ ಹೆಚ್ಚು ಪ್ರಾಬಲ್ಯ ಇದೆ. ಆದರೂ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ ಸಾಧ್ಯವಿರುವ ಎಲ್ಲ ಕಸರತ್ತು ನಡೆಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೆ.ಸಿದ್ರಾಮ ಹಾಗೂ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಕಾಶ ಖಂಡ್ರೆ ಈಗ ಒಂದಾಗಿದ್ದು, ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಲೇಬೇಕು ಎಂದು ನಿರ್ಧರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಯಾರಿಗೇ ಟಿಕೆಟ್‌ ಕೊಟ್ಟರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಾಲಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಸಲು ಪ್ರಯತ್ನ ನಡೆಸಿವೆ.

ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ಡಿ.ಕೆ. ಸಿದ್ರಾಮ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಬಿಜೆಪಿಯಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎನ್ನುವ ಅಘೋಷಿತ ನಿಯಮ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸೂತ್ರ ಪರಿಗಣಿಸಿದರೆ ಇಬ್ಬರೂ ಟಿಕೆಟ್‌ನಿಂದ ವಂಚಿತರಾಗಲಿದ್ದಾರೆ. ಹೊಸಬರಿಗೆ ಮಣೆ ಹಾಕಿದರೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಬಹಳ ಪ್ರಯಾಸ ಪಡಬೇಕಾಗಲಿದೆ. ಇದು ಬಿಜೆಪಿ ವರಿಷ್ಠರಿಗೂ ತಿಳಿದಿದೆ.

ಡಿ.ಕೆ.ಸಿದ್ರಾಮ ಅವರಿಗೆ ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಬೆಂಬಲವಿದೆ. ಅವರ ಮುಖಾಂತರ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಪಕ್ಷದ ಮುಖಂಡರ ಪರಿಚಯವಿದೆ. ಕ್ಷೇತ್ರದಲ್ಲಿ ತಮ್ಮದೇ ನೆಟ್‌ವರ್ಕ್ ಹೊಂದಿದ್ದಾರೆ.

ಡಾ.ದಿನಕರ ಮೋರೆ ಹಾಗೂ ಪ್ರಕಾಶ ಖಂಡ್ರೆ ಅವರ ಪುತ್ರ ಪ್ರಸನ್ನ ಖಂಡ್ರೆ ಹೆಸರುಗಳು ಸಹ ಕೇಳಿ ಬರುತ್ತಿವೆ. ಪ್ರಸನ್ನ ಖಂಡ್ರೆ ಹೆಸರು ಮುಂಚೂಣಿಯಲ್ಲಿದೆ. ಇವರಿಗೆ ಟಿಕೆಟ್‌ ನೀಡಿದರೆ ಮತ್ತೊಮ್ಮೆ ಸೋದರ ಸಂಬಂಧಿಗಳ ಮಧ್ಯೆ ಚುನಾವಣೆಯಲ್ಲಿ ಫೈಟ್‌ ನಡೆಯಲಿದೆ.

ಭಾಲ್ಕಿಯಲ್ಲಿ ಪಕ್ಷದ ಧ್ವಜ ನೆಡುವುದು ಸುಲಭವಲ್ಲವೆಂದು ಅರಿತಿರುವ ಜೆಡಿಎಸ್ ವರಿಷ್ಠರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನೇ ಘೋಷಿಸಲಿಲ್ಲ. ಬಿಜೆಪಿಯ ಟಿಕೆಟ್ ಸಿಗದವರು ಕೊನೆ ಕ್ಷಣದಲ್ಲಿ ಜೆಡಿಎಸ್‌ ಸೇರಿ ಕಣಕ್ಕಿಳಿಯುವುದನ್ನು ತಳ್ಳಿ ಹಾಕುವಂತಿಲ್ಲ. ಸದ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆಯೇ ನೇರ ಸ್ಪರ್ಧೆ ಇದೆ.

*‌***

ಭಾಲ್ಕಿ ವಿಧಾನಸಭಾ ಕ್ಷೇತ್ರ

......................................

ಈಶ್ವರ ಖಂಡ್ರೆ (ಕಾಂಗ್ರೆಸ್)

.......................................

‌ಹಾಲಿ ಮತದಾರರ ವಿವಿರ

1,16,904 ಪುರುಷರು, 1,055,60 ಮಹಿಳೆಯರು, 8 ತೃತೀಯ ಲಿಂಗಿಗಳು, ಒಟ್ಟು 2,22,472


ಚುನಾವಣೆ ಮತಗಳ ವಿವರ

ಪಕ್ಷಗಳು –2018 –2013–2008

ಕಾಂಗ್ರೆಸ್ –84,673 –58,012 –64,492

ಬಿಜೆಪಿ 63,235– 29,694–43,521

ಜೆಡಿಎಸ್ 15,142–2,255–12,893

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT