ಮಂಗಳವಾರ, ಫೆಬ್ರವರಿ 25, 2020
19 °C

ಗಮನ ಸೆಳೆದ ಶ್ವಾನ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ರಾಜ್ಯಮಟ್ಟದ ಪಶು ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನ ಗಮನ ಸೆಳೆಯಿತು.

ವೇದಿಕೆಯ ಮುಂಭಾಗದಲ್ಲಿ ನಡೆದ ಪ್ರದರ್ಶನವನ್ನು ನೋಡಲು ಜನ ಮುಗಿಬಿದ್ದರು. ಅನೇಕರು ಕುರ್ಚಿಗಳನ್ನು ಏರಿ ವಿವಿಧ ತಳಿಗಳ ನಾಯಿಗಳನ್ನು ಕಣ್ತುಂಬಿಕೊಂಡರು.

ನಾಯಿ ಮರಿಗಳ ವಿಭಾಗದ ಸ್ಪರ್ಧೆಯಲ್ಲಿ ಸಂಜಯ ಖೇಣಿ ಅವರ ಕಕೇರಿಯನ್ ಶಫರ್ಡ್ ತಳಿಯ ಆರು ತಿಂಗಳ ಮರಿ ₹1 ಸಾವಿರದ ಮೊದಲ ಬಹುಮಾನ ಗಳಿಸಿತು.

ದೊಡ್ಡ ನಾಯಿಗಳ ವಿಭಾಗದಲ್ಲಿ ಮುಧೋಳ ತಳಿಯ ಗಂಡು ನಾಯಿ ಪ್ರಥಮ, ರೊಟ್ಟವೇಲರ್ ತಳಿಯ ನಾಯಿ ದ್ವಿತೀಯ, ಸಂಜಯ ಖೇಣಿ ಅವರ ಫಿಲಾ ಬ್ರೆಜಿಲೆರೊ ತಳಿಯ ನಾಯಿ ತೃತೀಯ, ಬೀದರ್ ವಾಯುಪಡೆ ತರಬೇತಿ ಕೇಂದ್ರದ ಫರ್ನಾಂಡೀಸ್ ಅವರ ಜರ್ಮನ್ ಶಫರ್ಡ್ ತಳಿಯ ನಾಯಿ ನಾಲ್ಕನೇ ಹಾಗೂ ಮುಧೋಳ ತಳಿಯ ಹೆಣ್ಣು ನಾಯಿ ಐದನೇ ಬಹುಮಾನ ಪಡೆಯಿತು.

ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಹಾಗೂ ಐದನೇ ಬಹುಮಾನವಾಗಿ ಕ್ರಮವಾಗಿ ₹5 ಸಾವಿರ, ₹4 ಸಾವಿರ, ₹3 ಸಾವಿರ, ₹2 ಸಾವಿರ ಹಾಗೂ ₹1 ಸಾವಿರ ಮತ್ತು ಟ್ರೋಫಿ ಕೊಡಲಾಯಿತು.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಬಹುಮಾನ ವಿತರಿಸಿದರು. ಸಂಸದ ಭಗವಂತ ಖೂಬಾ ಹಾಗೂ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು