ಬೀದರ್ (ಶಾಂತರಸ ವೇದಿಕೆ): ‘ಮತೀಯ ಶಕ್ತಿಗಳಿಂದ ಕವಿಗಳು ಹಾಗೂ ಜನರು ಬಹಳ ಎಚ್ಚರದಿಂದ ಇರುವ ಅಗತ್ಯವಿದೆ’ ಎಂದು ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷ, ಕವಿ ಕಾಶಿನಾಥ ಅಂಬಲಗೆ ಸಲಹೆ ನೀಡಿದರು.

ಕರ್ನಾಟಕ ಗಜಲ್ ಅಕಾಡೆಮಿ, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ಭಾಷಣದಲ್ಲಿ ಹೇಳಿದರು.

ದೇಶದಲ್ಲಿ ಮತೀಯ ಶಕ್ತಿಗಳು ಅಧಿಕಾರಕ್ಕೆ ಬಂದು ಕುಳಿತಿವೆ. ಅದೇ ಶಕ್ತಿಗಳು ದೇಶದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ. ಅವರಿಂದ ಎಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಗಜಲ್ ಮೂಲಕ ದಯೆ, ಕರುಣೆ, ಕ್ಷಮೆ, ಸಮತೆ, ಸಹೃದಯತೆಗಳಿಗೆ ಶರಣಾಗಿ ಬುದ್ಧ, ಬಸವ, ಅಂಬೇಡ್ಕರ್, ಕಬೀರ ಹಾಗೂ ಇತರೆ ಸಂತ ಮಹಾಂತರ ದಾರಿಯ ಪಯಣಿಗರಾಗಲು ಪ್ರಯತ್ನಿಸೋಣ ಎಂದರು.

ಇಂದು ನಮ್ಮ ಬದುಕಿನಲ್ಲಿ ಜನಪರ, ಜೀವಪರ ಭಾವಗಳೆಲ್ಲ ಮಾಯವಾಗಿ ಮನುಷ್ಯರಲ್ಲಿ ಮನುಷ್ಯತ್ವದ ವಿರುದ್ಧವೇ ಒಳಸಂಚು ನಡೆಯುತ್ತಿದೆಯೇ ಎಂಬ ಭಾವ ಬರತೊಡಗಿದೆ. ಸುಳ್ಳಿನ ಭ್ರಮೆಗಳ ಸಮೃದ್ಧ ಬೆಳೆ ಬೆಳೆಯಲಾಗುತ್ತಿದೆ. ಬೆವರು ಸುರಿಸದವರು ಬೆವರಿನ ಫಲ ತಮ್ಮದಾಗಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಸಮಾಜದಿಂದ ಕವಿ ಬೆಳೆಯುತ್ತಾನೆ. ಅದೇ ರೀತಿ ಸಮಾಜದ ಹಿತಕ್ಕಾಗಿ ಕವಿಗಳಾದವರು ಕೆಲಸ ಮಾಡಬೇಕು. ಅದು ಕವಿಯ ಕರ್ತವ್ಯ ಕೂಡ ಹೌದು. ಗಜಲ್ ಕಾವ್ಯ ವಿಶ್ವ ಪರ್ಯಟನೆ ಕೈಗೊಂಡು ಜಾಗತೀಕವಾದ ಪ್ರೀತಿ, ಪ್ರೇಮಗಳ ಸುಗಂಧ ಹೊತ್ತುಕೊಂಡು ಕನ್ನಡ ಕಾವ್ಯಲೋಕದಲ್ಲಿ ನೆಲೆನಿಂತ ಬೆರುಗು! ಗಜಲ್ ಅಫ್ಘಾನಿಸ್ತಾನದ ಯಾವುದೋ ನಾಡಿನಲ್ಲಿ ಜನ್ಮ ತಳೆದ ಕಾವ್ಯ. ಅಲ್ಲಿಂದ ಇರಾನ್ ತೆರಳಿ ಅಲ್ಲಿ ಆಗಲೇ ಇದ್ದಿರಬಹುದಾದ ರಣಗೀತೆಗಳ ಜಾನಪದೀಯ ಪಲಕುಗಳಿಂದ ಒಂದಿಷ್ಟು ಪಡೆದುಕೊಂಡು, ಕೊಟ್ಟುಕೊಂಡು ಭಾರತ ಪ್ರವೇಶಿಸಿದೆ. ಇಲ್ಲಿ ಉರ್ದು, ಹಿಂದಿಯೊಂದಿಗೆ ಸರಡವಾಡಿ ಕನ್ನಡಕ್ಕೆ ಪ್ರವೇಶಿಸಿದೆ ಎಂದು ವಿವರಿಸಿದರು.

ಕನ್ನಡ ಕಾವ್ಯದಲ್ಲಿ ಈಗ ಗಜಲ್ ಬಿರುಗಾಳಿ ಎದ್ದಿದೆ. ಕನ್ನಡದಲ್ಲಿ ಈಗ ಸಾವಿರಕ್ಕೂ ಹೆಚ್ಚು ಗಜಲ್ ಕವಿಗಳಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳು ಕಟ್ಟಿಕೊಟ್ಟ ವಚನ ಚಳವಳಿ ದುಡಿಯುವ ವರ್ಗದ ಸಾಹಿತ್ಯ ಸಾಂಸ್ಕೃತಿಕ ಕೊಡುಗೆಯಾಗಿದೆ. ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಇಂತಹ ಸಮೃದ್ಧ ಕನ್ನಡ ಕಾವ್ಯ ಪರಂಪರೆಯ ನಾವುಗಳು ಗಜಲ್ ಕಾವ್ಯ ಸಮ್ಮೇಳನ ನಡೆಸುತ್ತಿರುವುದು ಶ್ಲಾಘನಾರ್ಹ ಎಂದು ವರ್ಣಿಸಿದರು.

ಗಜಲ್, ಭಾಷೆಯನ್ನು ಪರೀಕ್ಷೆಗೆ ಒಡ್ಡಬಲ್ಲ ಪ್ರಕಾರ. ಭಾಷೆಯೊಂದು ದಕ್ಕಿಸಿಕೊಂಡಿರುವ ಮಾಧುರ್ಯ, ರೂಪಕ ಶಕ್ತಿ, ನಾದ ಇತ್ಯಾದಿಗಳನ್ನು ಸೂರೆ ಮಾಡುವ ಶಕ್ತಿಯಿದೆ ಎಂದರು.

ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಮಂಗಳೂರಿನ ಹಿರಿಯ ಗಜಲ್ ಕವಿ ಮುಹಮ್ಮದ್ ಬಡ್ಡೂರು ಮಾತನಾಡಿ, ಕೆಡುಕರು ಸಾಹಿತಿಗಳಾಗುತ್ತಿರುವುದು ದುರಂತದ ಸಂಗತಿ. ಸಾಹಿತ್ಯದ ಪ್ರಕಾರದಲ್ಲಿ ಅತ್ಯಂತ ಕಠಿಣವಾದುದು ಕಾವ್ಯ, ಅದರಲ್ಲೂ ಗಜಲ್. ಇಂತಹ ಸಾಹಿತ್ಯ ಹೆಚ್ಚೆಚ್ಚೂ ಬೆಳೆಯುವ ಅಗತ್ಯವಿದೆ ಎಂದು ತಿಳಿಸಿದರು.

ಗಜಲ್ ಅಕಾಡೆಮಿ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಮೊದಲನೇ ಸಮ್ಮೇಳನ ಸಂಘಟಿಸಲು ಐದಾರೂ ವರ್ಷಗಳೇ ಬೇಕಾಯಿತು. ಎರಡನೇ ಸಮ್ಮೇಳನಕ್ಕೆ ಒಂದು ವರ್ಷ ಸಮಯ ಬೇಕಾಯಿತು. ಬರುವ ದಿನಗಳಲ್ಲಿ ಕಾಲಕಾಲಕ್ಕೆ ನಿಯಮಿತವಾಗಿ ನಡೆಯಲಿದೆ ಎಂದು ಹೇಳಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್. ದೇಸಾಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ, ಕವಿ ಅಬ್ದುಲ್ ಹೈ, ನಗರಸಭೆ ಸದಸ್ಯ ದಿಗಂಬರ್ ಮಡಿವಾಳ ಇದ್ದರು. ಪ್ರಾಧ್ಯಾಪಕಿ ಸುನೀತಾ ಕೂಡ್ಲಿಕರ್ ನಿರೂಪಿಸಿದರು. ಉಮಾಕಾಂತ ಮೀಸೆ ವಂದಿಸಿದರು. ಶಂಭುಲಿಂಗ ವಾಲ್ದೊಡ್ಡಿ ಗಜಲ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾವ್ಯ ಯುದ್ಧ ವಿರೋಧಿ, ಹಿಂಸೆಯ ವಿರೋಧಿಯಾಗಿರುತ್ತದೆ. ಅದು ಒಟ್ಟಂದದಲ್ಲಿ ಅಹಿಂಸಾಪರವಾಗಿರುತ್ತದೆ. ಪ್ರಶ್ನಾತೀತ ಪ್ರೀತಿಯಿಂದ ತುಂಬಿ ತುಳುಕುತ್ತದೆ. ಕವಿತೆ ಎನ್ನುವುದು ಬಹಳ ಖರತ್ನಾಕ್ ಕೂಡ ಆಗಿರುತ್ತದೆ. ಆದರೆ, ಸರ್ವಾಧಿಕಾರಿ ಆಳುವ ವರ್ಗಕ್ಕಷ್ಟೇ.
–ಕಾಶಿನಾಥ ಅಂಬಲಗೆ, ಕವಿ

‘ಗಜಲ್ ಕವಿಗಳಿಗೆ ವೇದಿಕೆ’

‘ಗಜಲ್ ಕವಿಗಗಳಿಗೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದಲೇ ಗಜಲ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇಡೀ ಕರ್ನಾಟಕದಲ್ಲಿ ಹಂಚಿ ಹೋಗಿರುವ ಗಜಲ್ ರಚನೆಕಾರರು ಒಂದೆಡೆ ಸೇರಬೇಕು ಎನ್ನುವ ಉದ್ದೇಶ ಇದರದ್ದು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಹೇಳಿದರು.

ಇದು ಎರಡನೇ ಸಮ್ಮೇಳನ. ಇದೇ ರೀತಿ ಪ್ರತಿವರ್ಷ ಸಮ್ಮೇಳನ ಸಂಘಟಿಸುವ ಮೂಲಕ ಈ ಪರಂಪರೆ ಮುಂದುವರೆಸಲಾಗುವುದು. ಅಕಾಡೆಮಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದರು.

‘ಪುಸ್ತಕ ಓದಿದರೆ ಜ್ಞಾನಿಗಳ ಒಡನಾಟದಂತೆ’

‘ಪುಸ್ತಕಗಳು ಜ್ಞಾನದ ಭಂಡಾರ. ಪುಸ್ತಕಗಳನ್ನು ಓದಿರೆ ಜ್ಞಾನಿಗಳು, ಚಿಂತಕರೊಂದಿಗೆ ಒಡನಾಡಿದ ಅನುಭವ ಆಗುತ್ತದೆ. ನಮ್ಮ ಜ್ಞಾನ ವಿಸ್ತಾರವಾಗುತ್ತದೆ’ ಎಂದು ಕವಿ ಕಾಶಿನಾಥ ಅಂಬಲಗೆ ಹೇಳಿದರು.

ಪುಸ್ತಕ ಬರೆಯುವುದು, ಓದುವುದು, ಅದರ ಬಗ್ಗೆ ಚರ್ಚಿಸುವ ಕಾರ್ಯಕ್ರಮಕ್ಕಿಂತ ದೊಡ್ಡ ಕಾರ್ಯಕ್ರಮ ಮತ್ತೊಂದಿಲ್ಲ. ಒಂದು ಉತ್ತಮ ಕಾವ್ಯದಿಂದ ಉತ್ತಮ ಸಮಾಜ ರೂಪುಗೊಳ್ಳಲು ಸಾಧ್ಯವಿದೆ. ಇದರಿಂದ ಸಾಹಿತ್ಯ, ಪುಸ್ತಕಗಳ ಮಹತ್ವ ಅರಿಯಬಹುದು ಎಂದರು.

ಬಿಡುಗಡೆಗೊಂಡ ಕೃತಿಗಳಿವು...

ಎ. ಕಮಲಾಕರ ಅವರ ‘ಗಜಲ್ ನಿನಾದ’, ಪ್ರಭಾವತಿ ದೇಸಾಯಿಯವರ ‘ಕಿಚ್ಚಿಲ್ಲದ ಆವಿಗೆ’, ಸಿದ್ದರಾಮ ಹೊನ್ಕಲ್ ಅವರ ‘ಗಜಲ್ ಧಾರೆ’, ಜ್ಯೋತಿ ಮಾಳಿ ಅವರ ‘ಹಾಳು ಗೋಡೆಯಲ್ಲೊಂದು ಚಿಗುರು’, ವಿಜಯಕುಮಾರ ಗೌರೆ ಅವರ ‘ಕನ್ನಡಿಯೊಳಗಿನ ಪ್ರತಿಬಿಂಬ’, ಪ್ರೊ. ವೈ.ಎಂ. ಯಾಕೊಳ್ಳಿ ಅವರ ‘ನೆಲಕ್ಕೆ ನೇಸರದೇ ಧ್ಯಾನ’, ಅನ್ನಪೂರ್ಣ ಆರ್. ಹಿರೇಮಠ ಅವರ ‘ಮೌನವೀಣೆ ನುಡಿದಾಗ’, ಸುರೇಶ ನೆಗಳಗುಳಿ ಅವರ ‘ಕುವಲಯ’, ರೇಣುಕಾತಾಯಿ ಸಂತಬಾ ರೇಮಾಜಿ ಅವರು ‘ದಿಲ್ಕಶ್ ಗಜಲ್’, ಆನಂದ ಭೋವಿ ಅವರ ‘ಹೇಗೆ ಬಿಡಿಸಿಕೊಳ್ಳಲಿ’, ಅರುಣ್ ಕೂಡ್ಲಿಗಿ ಅವರ ‘ಕಾಡಿದ ಕಂಗಳು’ ಕೃತಿಗಳನ್ನು ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.