ಬೀದರ್: ‘ಮೇದಾರ ಕೇತಯ್ಯ ಶರಣರು ಬಸವಯುಗದ ಧೃವತಾರೆಯಾಗಿದ್ದರು. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ’ ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನ ಬಸವಗಿರಿ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ನುಡಿದರು.

ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ಬಸವಗಿರಿ ಬೀದರ್ ವತಿಯಿಂದ ನಡೆದ ಶರಣ ಸಂಗಮ, ಕರ್ನಾಟಕ ರಾಜ್ಯೋತ್ಸವ ಹಾಗೂ ಶರಣ ಮೇದಾರ ಕೇತಯ್ಯನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕೇತಯ್ಯನವರು ಬಸವಣ್ಣನವರ ಪ್ರಭಾವದಿಂದ ಗುರು ಲಿಂಗ ಜಂಗಮದಲ್ಲೇ ತನ್ನ ನಿಜ ಸುಖ ಕಂಡವರು. ಶರಣರ ತತ್ವಗಳಾದ ದಯೆ, ಕರಣೆ, ಕಾಯಕ ದಾಸೋಹ ತತ್ವಗಳನ್ನು ಅನುಷ್ಠಾನದಲ್ಲಿ ತಂದವರು. ಅವರ ಜೀವನವೇ ಸತ್ಯ ಶುದ್ಧ ಕಾಯಕ ಸಂದೇಶವಾಗಿದೆ’ ಎಂದು ನುಡಿದರು.

ಜಿಲ್ಲಾ ನಿವೃತ್ತ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಸಿ.ಎಸ್. ರಗಟೆ ಮಾತನಾಡಿ, ‘ಶರಣರ ವಚನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು. ಬಸವ ಧ್ಯಾನ ಮಾಡಿ ಅವರ ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ತಾಯಂದಿರು ಮಾಡಬೇಕು’ ಎಂದು ಹೇಳಿದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ ಅತಿವಾಳೆ ಮಾತನಾಡಿ, ‘ಬಸವಾದಿ ಶರಣರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ. ವಿಶ್ವಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ’ ಎಂದು ಹೇಳಿದರು.

ಕಲಬುರಗಿ ಶರಣ ಬಸವೇಶ್ವರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ನರೇಶಕುಮಾರ ಅನುಭಾವ ನೀಡಿ, ‘ಕಾಯಕವೇ ಕೈಲಾಸವಾದ ಶರಣರಿಗೆ ಕಾಯಕದಿಂದಲೇ ಜೀವನ್ಮುಕ್ತಿ. ಕೈಲಾಸಕ್ಕಿಂತಲೂ ಕಾಯಕವೇ ಮೇಲೆಂದು ಸಾರಿದವರು ಮೇದಾರ ಕೇತಯ್ಯನವರು’ ಎಂದರು.

ಮೇದಾರ ಕೇತಯ್ಯ ಸಮಾಜದ ಜಿಲ್ಲಾಧ್ಯಕ್ಷ ರಾಜಕುಮಾರ ನಾಗೇಶ್ವರ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ ಎನ್. ಧ್ವಜಾರೋಹಣ ನೆರವೇರಿಸಿದರು. ಜಯಶ್ರೀ ಮೇದಾ, ಜಗದೇವಿ ಸಂಜುಕುಮಾರ ಚಾಂಬಾಳೆ, ನಿರ್ಮಲಾ ಕೋಳಾರ, ನೀಲಗಂಗಾ ಹೆಬ್ಬಾಳೆ ಹಾಗೂ ಇನ್ನಿತರರು ಹಾಜರಿದ್ದರು.

ಮಹಾತ್ಮ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳು ಕನ್ನಡ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.