‘ಖಂಡ್ರೆ ವಿರುದ್ಧ ಪ್ರತಿಭಟನೆ’
‘ಕಾರ್ಖಾನೆಯ ಪುನಶ್ಚೇತನಕ್ಕೆ ಸಚಿವ ಖಂಡ್ರೆ ಅವರು ಓಟಿಎಸ್ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹತ್ತಿರ ಆದಷ್ಟು ಬೇಗ ಸಮಯ ಕೇಳಿ ಚರ್ಚೆ ನಡೆಸಬೇಕು. ಇಲ್ಲದಿದ್ದರೆ ಈಶ್ವರ ಖಂಡ್ರೆ ವಿರುದ್ಧ ಪ್ರತಿಭಟನೆ ಮಾಡುತ್ತೇವೆ’ ಎಂದು ಕಾರ್ಖಾನೆಯ ಉಪಾಧ್ಯಕ್ಷ ವಿಶ್ವನಾಥ್ ಪಾಟೀಲ ಮಾಡಗೂಳ ತಿಳಿಸಿದರು. ಈ ಕಾರ್ಖಾನೆ ಲೀಸ್ ತೆಗೆದುಕೊಳ್ಳಲು ಯಾರೂ ಬಂದಿರಲಿಲ್ಲ. ಆದರೆ ಈಗ ಮೂವರು ಉದ್ಯಮಿಗಳು ಲೀಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರು ಮೌನ ವಹಿಸುವುದು ಸರಿಯಲ್ಲ. ಬೆಂಗಳೂರಿನಲ್ಲಿ ಸಭೆ ಮಾಡಿ 20 ದಿನಗಳು ಕಳೆದಿವೆ. ಯಾವ ಕಾರಣಕ್ಕೆ ನೀವು ಈ ಕಾರ್ಖಾನೆ ಆರಂಭ ಮಾಡುವುದಕ್ಕೆ ಮನಸ್ಸು ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.