ಗುರುವಾರ , ಜುಲೈ 7, 2022
23 °C
ಚಿಟಗುಪ್ಪದಲ್ಲಿ ನಡೆದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಸಂಗೀತಾ ಪಾಟೀಲ ಸಲಹೆ

ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಮಾಸ್ಟರ್‌ ಮೈಂಡ್‌ ಪೂರಕ: ಸಂಗೀತಾ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ‘ಸ್ಪಧಾತ್ಮಕ ಪರೀಕ್ಷಾ ಸಿದ್ಧತೆಗೆ ‘ಪ್ರಜಾವಾಣಿ’ಯ ಮಾಸ್ಟರ್‌ ಮೈಂಡ್‌ ಆನ್‌ಲೈನ್‌ ಪತ್ರಿಕೆ ಉಪಯುಕ್ತ’ ಎಂದು ಪ್ರಾಚಾರ್ಯೆ ಸಂಗೀತಾ ಪಾಟೀಲ ತಿಳಿಸಿದರು.

ಮಾಸ್ಟರ್‌ ಮೈಂಡ್‌ ಆನ್‌ಲೈನ್‌ ಪತ್ರಿಕೆ ಸಹಯೋಗದಲ್ಲಿ ಸದ್ಬೋಧಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಪತ್ರಿಕೆಯಲ್ಲಿ, ಬಹು ಆಯ್ಕೆಯ ವಸ್ತು ಹಾಗೂ ವಿಷಯನಿಷ್ಠ ಅಂಶಗಳ ಕುರಿತು ಅತ್ಯಂತ ವಿವರವಾಗಿ ಬರೆಯಲಾಗುತ್ತದೆ. ಅಭ್ಯರ್ಥಿಗಳಿಗೆ ಸಂಪೂರ್ಣ ಜ್ಞಾನ ಒದಗಿಸಲಾಗುತ್ತಿದೆ. ಅಭ್ಯರ್ಥಿಗಳು ಇದನ್ನು ಪ್ರತಿದಿನ ಅಧ್ಯಯನ ಮಾಡಿದರೆ, ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.

ವೀರೇಶ್‌.ಎನ್‌ ಮಠಪತಿ ಸ್ಫರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತು ಉಪನ್ಯಾಸ ನೀಡಿದರು. ಪ್ರವೀಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕ ಸೋಮನಾಥ ಪಾಟೀಲ ಮಾತನಾಡಿ,‘ಪ್ರಜಾವಾಣಿ 70 ವರ್ಷಗಳಿಂದ ರಾಜ್ಯದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದೆ. ಪ್ರತಿಭಾನ್ವಿತರಿಗೆ ವೇದಿಕೆಯಾಗಿದೆ’ ಎಂದರು.

ಕನ್ನಡ ಪಂಡಿತ ನೀಲಕಂಠ ಇಸ್ಲಾಮಪುರ್‌, ಮುಖ್ಯಶಿಕ್ಷಕ ಅಶೋಕ ಮಠಪತಿ ಹಾಗೂ ಆಡಳಿತಾಧಿಕಾರಿ ರಾಜಕುಮಾರ್‌ ಇದ್ದರು.

ಪದವಿ ಪೂರ್ವ ಹಾಗೂ ‍ಪದವಿಯ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಸ್ಥಳದಲ್ಲಿಯೇ ಹಲವರು ಮಾಸ್ಟರ್‌ ಮೈಂಡ್‌ ಚಂದಾದಾರಿಕೆ ಪಡೆದರು. ಶಿಬಿರದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆ, ಗೊಂದಲಗಳಿಗೆ ಉಪನ್ಯಾಸಕರು ಉತ್ತರಿಸಿದರು.

ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು