ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂಜನ ಸ್ವಾಮೀಜಿ ಸ್ಮರಣೋತ್ಸವ: ಪೂರ್ವಭಾವಿ ಸಭೆ

Last Updated 14 ನವೆಂಬರ್ 2022, 14:56 IST
ಅಕ್ಷರ ಗಾತ್ರ

ಕಮಲನಗರ: ‘ಸೋನಾಳ ವಿರಕ್ತ ಮಠದಲ್ಲಿ ಡಿ.21, 22 ರಂದು ನಿರಂಜನ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ’ ಎಂದು ಹೂವಿನಶಿಗ್ಲಿ, ಸೋನಾಳ ವಿರಕ್ತ ಮಠದ ಪೀಠಾಧಿಪತಿ ಚನ್ನವೀರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸೋನಾಳ ಗ್ರಾಮದ ನಿರಂಜನ ಸ್ವಾಮೀಜಿ ವಿರಕ್ತಮಠದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸ್ಮರಣೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷ ಪ್ರವಚನ, ಕೊನೆಯ ದಿನ ಉತ್ಸವ ಕಾರ್ಯಕ್ರಮ ಆಚರಿಸಲಾಗುವುದು. ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗುವುದು ಎಂದರು.

ಡಿ.11ರಿಂದ ಲಿಂಗದೀಕ್ಷೆ, ಪ್ರವಚನ, ಮಹಾಮಂಗಳ, ಕುಂಭ, ಭಾವಚಿತ್ರ ಮೆರವಣಿಗೆ, ಧಾರ್ಮಿಕ ಅರಿವು, ನಾಣ್ಯ ತುಲಾಭಾರ ಕಾರ್ಯಕ್ರಮ ನಡೆಯಲಿದೆ.

ಪಿಕೆಪಿಎಸ್ ಸಹಾಯಕ ನಿರ್ದೇಶಕ ಶಾಂತಪ್ಪ ದೇವಪ್ಪ ಮಾತನಾಡಿ,‘ನಿರಂಜನ ಸ್ವಾಮೀಜಿ ಸ್ಮರಣೋತ್ಸವ ತಾಲ್ಲೂಕಿನ ಪ್ರಮುಖ ಉತ್ಸವ. ಇತರ ಜಾತ್ರೆಗಳಂತೆ ವಿಜೃಂಭಣೆಯಿಂದ ನಡೆಯುತ್ತದೆ. ಗ್ರಾಮದಲ್ಲಿ ನಡೆಯುವ ಸ್ಮರಣೋತ್ಸವಕ್ಕೆ ಪ್ರತಿ ವರ್ಷದಂತೆ ನೆರವು ನೀಡಲಾಗುವುದು’ ಎಂದರು.

ನೂರಾರು ಸ್ವಾಮೀಜಿಗಳು, ಭಕ್ತರು ಬರುತ್ತಾರೆ. ಪ್ರತಿವರ್ಷ ಡಿ.11 ರಿಂದ ಡಿ.22 ರವರೆಗೆ ಸ್ಮರಣೋತ್ಸವ ನೆರವೇರಿಸಲಾಗುವುದು ಎಂದರು.

ಗ್ರಾಮದ ಹಿರಿಯ ಕಲ್ಯಾಣರಾವ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಅಲಬಿದೆ, ಗುಂಡಪ್ಪ ಚಿಂಚೋಳೆ, ಶಿವಯೋಗಿ ಪಠವಾರಿ, ಶಿವಕಾಂತ ಬಿರಾದಾರ, ಶರಣಪ್ಪ ಬಿರಾದಾರ, ನೆಹರೂ ಬಿರಾದಾರ, ವಿಜಯಕುಮಾರ ಬಿರಾದಾರ, ಶಿವಕುಮಾರ ಕೌಡಗಾಂವೆ, ಶರಣಪ್ಪ ಹಣಮಶೇಟ್ಟೆ, ರಾಜಕುಮಾರ ಘಾಳೆ ಹಾಗೂ ಅಂಕುಶ ಹಣಮಶೇಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT