ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದಿಂದ ಮನಸ್ಸಿಗೆ ಆನಂದ: ಬಿರಾದಾರ

Last Updated 12 ಫೆಬ್ರುವರಿ 2021, 15:08 IST
ಅಕ್ಷರ ಗಾತ್ರ

ಬೀದರ್: ಸಂಗೀತ ಮನಸ್ಸಿಗೆ ಆನಂದ ನೀಡುತ್ತದೆ ಎಂದು ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ. ಎಸ್.ಬಿ. ಬಿರಾದಾರ ನುಡಿದರು.

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ವತಿಯಿಂದ ಇಲ್ಲಿಯ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಆಯೋಜಿಸಿದ್ದ ಶಾಲೆಗೊಂದು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ ಅಧ್ಯಕ್ಷತೆ ವಹಿಸಿದ್ದರು. ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಲಾವಿದ ರಾಜೇಂದ್ರಸಿಂಗ್ ಪವಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಮೇಶ ಕೊಳಾರ ತಬಲಾ ಸಾಥ್ ನೀಡಿದರು.

ಶಿಕ್ಷಕಿ ಸರಿತಾ ಪಾಂಚಾಳ, ವಿದ್ಯಾರ್ಥಿ ಮಂಜುನಾಥ ಮಜಗೆ ಗಾಯನ ಮಾಡಿದರು.

ಸಾಹಿತಿ ವಿ.ಎಂ. ಡಾಕುಳಗಿ, ವೀರಭದ್ರಪ್ಪ ಉಪ್ಪಿನ್, ಮುಖ್ಯ ಶಿಕ್ಷಕಿ ಜ್ಯೋತಿ ರಾಗಾ, ವಿಶ್ವನಾಥ ಶಿಕಾರಿ, ಅಶೋಕ್ ಪಾಟೀಲ, ಸಚಿನ್ ಇದ್ದರು. ಕಾರಂಜಿ ಸ್ವಾಮಿ ಸ್ವಾಗತಿಸಿದರು. ವಿಲ್ಸನ್ ಭಾಸ್ಕರ್ ನಿರೂಪಿಸಿದರು. ಸಂತೋಷ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT