ಭಾನುವಾರ, ನವೆಂಬರ್ 27, 2022
27 °C
ಐದು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ

ಬೀದರ್: ಶಾಸಕರಿಂದ ₹1.20 ಲಕ್ಷ ವೈಯಕ್ತಿಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ತಾಲ್ಲೂಕಿನ ಐದು ಸಂತ್ರಸ್ತ ಕುಟುಂಬಗಳಿಗೆ ಒಟ್ಟು ₹1.20 ಲಕ್ಷ ವೈಯಕ್ತಿಕ ನೆರವು ನೀಡುವ ಮೂಲಕ ಶಾಸಕ ರಹೀಂಖಾನ್ ಮಾನವೀಯತೆ ಮೆರೆದಿದ್ದಾರೆ.

ಕಂಗಟಿ ಗ್ರಾಮದಲ್ಲಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಆನಂದಾ ಸಂಜುಕುಮಾರ (32) ಹಾಗೂ ಪ್ರಜ್ವಲ್ ಸಂಜುಕುಮಾರ ಕುಟುಂಬ ಮತ್ತು ಸುನಿತಾ ಮಂಜುನಾಥ (30) ಹಾಗೂ ನಾಗಶೆಟ್ಟಿ ಮಂಜುನಾಥ (10) ಕುಟುಂಬಕ್ಕೆ ತಲಾ ₹ 30 ಸಾವಿರ ಸಹಾಯ ಧನ ನೀಡಿದರು.

ಅಲಿಯಂಬರ್ ಗ್ರಾಮದಲ್ಲಿ ಈಜಾಡಲು ಹೋಗಿ ಸಾವಿಗೀಡಾದ ವಿನೀಶ್ ಸುಭಾಷ್ (19) ಮತ್ತು ಮಾಶೆಟ್ಟೆ ಸುಭಾಷ್ (21) ಕುಟುಂಬ ಹಾಗೂ ಹಮಿಲಾಪುರದಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಮಿಸ್ಬಾವುದ್ದಿನ್ ಬೇಗ್ ಸಾಲಾರ್ ಬೇಗ್ (16) ಕುಂಟುಂಬಕ್ಕೆ ತಲಾ ₹ 25 ಸಾವಿರ ನೆರವು ಕಲ್ಪಿಸಿದರು. ಅದೇ ಗ್ರಾಮದಲ್ಲಿ ಅನಾರೋಗ್ಯದಿಂದ ಪತ್ನಿ ಸಾವಿಗೀಡಾದ ಅಂಗವಿಕಲ ಸಮದ್ ಕುಟುಂಬಕ್ಕೆ ₹ 10 ಸಾವಿರ ಸಹಾಯ ಧನ ನೀಡಿದರು.

ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ ಶಾಸಕರು, ಸರ್ಕಾರದಿಂದ ಸಾಧ್ಯವಾದ ಎಲ್ಲ ನೆರವು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.