ಬಸವಕಲ್ಯಾಣ: ನಗರದಲ್ಲಿ ಗುರುವಾರ ನಡೆದ ಶ್ರೀರಾಮ ನವಮಿಯ ಮೆರವಣಿಗೆಯಲ್ಲಿ ಶ್ರೀರಾಮನ ಉತ್ಸವ ಮೂರ್ತಿಯ ತೊಡೆಯ ಮೇಲೆ ನಿಂತು ಪುಷ್ಪಮಾಲೆ ಅರ್ಪಿಸಿದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
ಅವರು ಶುಕ್ರವಾರ ಫೇಸಬುಕ್ ಲೈವ್ ಮೂಲಕ ಈ ಬಗ್ಗೆ ಸ್ಪಷ್ಟಿಕರಣ ನೀಡಿ ಒಂದು ವೇಳೆ ನಿಮಗೆ ಇದು ತಪ್ಪು ಎನಿಸಿದರೆ ಕ್ಷಮೆ ಕೇಳುತ್ತೇನೆ. ನಾನೂ ಅಪ್ಪಟ ರಾಮ ಭಕ್ತ, ಹಿಂದೂ ಕಾರ್ಯಕರ್ತನಾಗಿದ್ದೇನೆ. ಶ್ರೀರಾಮನ ಮೇಲಿನ ಅತಿಯಾದ ಭಕ್ತಿ, ಪ್ರೀತಿಯ ಕಾರಣ ತೊಡೆ ಏರಿ ಪುಷ ಮಾಲೆ ಅರ್ಪಿಸಿದ್ದು ನಿಜವಾಗಿದೆ. ಕಾರ್ಯಕ್ರಮ ಸಮಿತಿ ಸದಸ್ಯರ ಅನುಮತಿ ಪಡೆದೇ ಮೇಲೇರಿ ಮಾಲೆ ಹಾಕಿ ಆರತಿ ಬೆಳಗಿದ್ದೇನೆ. ನಂತರ ಕೆಳಗೆ ಇಳಿಯುವಾಗ ತೊಡೆಗೆ ಹಣೆಹಚ್ಚಿ ನಮಸ್ಕರಿಸಿದ್ದೇನೆ. ನಮ್ಮ ಹಿತಶತ್ರುಗಳು, ಆಗದವರು ಅದನ್ನು ತೋರಿಸಿಲ್ಲ. ಆದರೂ ನಾನು ಆಗಿರುವ ಪ್ರಮಾದಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.