ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಟಕಚಿಂಚೋಳಿ: ನೂತನ ಸಂಸದ ಸಾಗರ ಖಂಡ್ರೆಗೆ ಸನ್ಮಾನ

Published 16 ಜೂನ್ 2024, 15:23 IST
Last Updated 16 ಜೂನ್ 2024, 15:23 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಚಳಕಾಪುರ ಗ್ರಾಮದ ಹನುಮಾನ ದೇವಸ್ಥಾನಕ್ಕೆ ಭಾನುವಾರ ನೂತನ ಸಂಸದ ಸಾಗರ ಈಶ್ವರ ಖಂಡ್ರೆ ಭೇಟಿ ನೀಡಿ ಹನುಮಾನ ದೇವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಸಂಸದರಿಗೆ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,' ಜಿಲ್ಲೆಯ ಜನ ನನ್ನ ಮೇಲೆ ವಿಶ್ವಾಸವಿಟ್ಟು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ' ಎಂದು ಭರವಸೆ ನೀಡಿದರು.

ಚಳಕಾಪುರ ಗ್ರಾಮಸ್ಥರಿಂದ ನೂತನ ಸಂಸದ ಸಾಗರ ಖಂಡ್ರೆಗೆ ಸನ್ಮಾನ ಮಾಡಲಾಯಿತು
ಚಳಕಾಪುರ ಗ್ರಾಮಸ್ಥರಿಂದ ನೂತನ ಸಂಸದ ಸಾಗರ ಖಂಡ್ರೆಗೆ ಸನ್ಮಾನ ಮಾಡಲಾಯಿತು

ಪ್ರಮುಖರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕುಲಕರ್ಣಿ, ಶಿವರಾಜ ಮಾಸೂಲದಾರ್, ಮಹಾಲಿಂಗಯ್ಯ ಸ್ವಾಮಿ, ಶಿವಾಜಿ, ದೇವಪ್ಪ ರುಮ್ಮಾ, ಶರಣ ರೆಡ್ಡಿ, ಸುಭಾಷ ಕೆನಾಡೆ, ಭೀಮರಾವ್ ಭೀಮಶೆಟ್ಟಿ,‌ ಬಸವರಾಜ , ಲವಕುಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT