ಬೀದರ್: ನನ್ನ ತಂದೆಗೆ ಇಬ್ಬರು ಹೆಣ್ಣು ಮಕ್ಕಳು. ‘ನೀವು ಹೆಣ್ಣು ಮಕ್ಕಳೂ ಹೌದು, ಗಂಡು ಮಕ್ಕಳೂ ಹೌದು!’ ಎನ್ನುತ್ತಲೇ ತಂದೆಯವರು ನಮ್ಮನ್ನು ಬೆಳೆಸಿದರು. ನನ್ನಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮನೆಯಿಂದಲೇ ಆರಂಭವಾಯಿತು. ಅದೇ ಆತ್ಮವಿಶ್ವಾಸ ರಾಷ್ಟ್ರಮಟ್ಟದಲ್ಲಿ ನನ್ನ ಹಾಗೂ ಪಾಲಕರ ಗೌರವ ಹೆಚ್ಚುವಂತೆ ಮಾಡಿತು. ಮದುವೆಯಾದ ನಂತರ ಸಹ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟವನ್ನು ಮುಡಿಗೇರಿಸಿಕೊಳ್ಳುವಂತೆ ಮಾಡಿತು.

ಬೀದರ್‌ನಲ್ಲಿ ಜನಿಸಿರುವ ನಾನು ಮುಕ್ತವಾದ ಪರಿಸರದಲ್ಲಿ ಬೆಳೆದಿದ್ದೇನೆ. ನಮ್ಮ ಸಮಾಜ ಇಂದಿಗೂ ಸಂಪ್ರದಾಯಕ್ಕೆ ಅಂಟಿಕೊಂಡಿದೆ. ಹಾಗಂತ ನಮ್ಮ ಪಾಲಕರು ಎಂದೂ ಕಟ್ಟಳೆಗಳನ್ನು ವಿಧಿಸಲಿಲ್ಲ. ತಂದೆ ರಾಜಶೇಖರ ಪಾಟೀಲ ಅಷ್ಟೂರ್ ಅವರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿ ಕೊಂಡಿದ್ದಾರೆ. ತಾಯಿ ವಿಜಯಶ್ರೀ ಮನೆಯನ್ನು ನೋಡಿಕೊಂಡು ನಮ್ಮನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಇಬ್ಬರೂ ನಮಗೆ ಅಸಕ್ತಿ ಇರುವ ಶಿಕ್ಷಣ ಕೊಡಿಸಿ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡಿದ್ದಾರೆ.

ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯ ರಿಂಗ್ ಪದವಿ ಪಡೆದುಕೊಂಡಿದ್ದೇನೆ. ಒಂದು ವರ್ಷ ಮೈಕ್ರೋಲ್ಯಾಂಡ್‌ನಲ್ಲಿ ಕಾರ್ಯ ನಿರ್ವಹಿಸಿದ್ದೇನೆ.

ಶಾಲಾ ದಿನಗಳಲ್ಲಿ ಗಾಯನ ಸ್ಪರ್ಧೆಯಲ್ಲಿ ಪ್ರತಿ ವರ್ಷ ಮೊದಲ ಬಹುಮಾನ ನಾನೇ ಪಡೆದುಕೊಳ್ಳುತ್ತಿದ್ದೆ. ರ್‍ಯಾಂಪ್ ವಾಕ್, ಮಾಡೆಲಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಪ್ರತಿ ಶನಿವಾರ ಶಾಲೆಯಲ್ಲಿ ಆಯೋಜಿಸುತ್ತಿದ್ದ ರಂಗೋಲಿ, ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ಆದರೆ, ಕಾಲೇಜಿನಲ್ಲಿ ಮಾತ್ರ ಓದಿಗೆ ಹೆಚ್ಚು ಸಮಯ ಮೀಸಲಿಡುತ್ತಿದ್ದೆ.

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಯಾಪ್ಟನ್ ಪ್ರವೀಣ ತುಂಬಗಿ ಅವರಿಗೆ ನನ್ನನ್ನು ಮದುವೆ ಮಾಡಿಕೊಡಲಾಗಿದೆ. ಈಗ ಜಮ್ಮುವಿನಲ್ಲಿ ವಾಸವಾಗಿದ್ದೇವೆ. ತವರು ಮನೆಯವರು ಎಷ್ಟು ಬೆಂಬಲ ನೀಡಿದರೋ, ಗಂಡನ ಮನೆಯವರೂ ಅಷ್ಟೇ ಪ್ರೋತ್ಸಾಹ ನೀಡುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಇಂಟರ್ನೆಟ್ ಸುದ್ದಿ ನೋಡುತ್ತಿದ್ದಾಗ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಸ್ಪರ್ಧೆಗೆ ನೋಂದಣಿ ಆರಂಭವಾಗಿರುವುದು ಗೊತ್ತಾಯಿತು. ಹೆಸರು ನೋಂದಣಿ ಮಾಡಿಕೊಂಡು ಆನ್‌ಲೈನ್‌ನಲ್ಲೇ ಸ್ಪರ್ಧೆ ನೀಡಿದೆ.

ಮಂಗಳೂರು, ಮೈಸೂರು, ಬೆಂಗಳೂರಿನ ಬೆಡಗಿಯರು ಸೇರಿ ಒಟ್ಟು ರಾಜ್ಯದ 65 ಸ್ಪರ್ಧಿಗಳು ಭಾಗವಹಿಸಿದ್ದರು. ಬೀದರ್ ಜಿಲ್ಲೆಯಿಂದ ನಾನೊಬ್ಬಳೇ ಸ್ಪರ್ಧಿಸಿದ್ದೆ. ಕೊನೆಯ ಗಳಿಗೆಯಲ್ಲಿ ನನ್ನ ಹೆಸರು ಅಂತಿಮಗೊಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳಿಸಲಾಯಿತು.

ನವೆದಹಲಿಯ ಗ್ಲೋಬಲ್ ಪ್ಲೆಜೆಂಟ್ಸ್‌ನಲ್ಲಿ ಆದಿತ್ಯ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ಪ್ರಾಯೋಜಕತ್ವದಲ್ಲಿ ಸಂಘಟಿಸಿದ್ದ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಸೌಂದರ್ಯ, ಬುದ್ಧಿವಂತಿಕೆ ಹಾಗೂ ಸಾಮಾಜಿಕ ಸೂಕ್ಷ್ಮತೆಗೂ ಆದ್ಯತೆ ನೀಡಲಾಗಿತ್ತು. ಜಗತ್ತಿಗೆ ಪ್ರೇರಣೆ ನೀಡುವ ಪರಿಪೂರ್ಣ ಮಹಿಳೆಯನ್ನು ಗುರುತಿಸುವುದು ಸ್ಪರ್ಧೆಯ ಉದ್ದೇಶವಾಗಿತ್ತು. ಅಂತಿಮ ಸ್ಪರ್ಧೆಯಲ್ಲಿ ಕಿರೀಟ ಒಲಿಯಿತು. ಅಂತರರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸದಾವಕಾಶವೂ ಬಂದೊದಗಿದೆ.

ಪತಿ ಪ್ರವೀಣ ತುಂಬಗಿ ಬೆನ್ನೆಲುಬಾಗಿ ನಿಂತು ಭಾವನೆಗಳನ್ನು ಹಂಚಿಕೊಂಡು ಪ್ರೋತ್ಸಾಹಿಸಿದ್ದಾರೆ. ಮದುವೆಯಾದ ತಕ್ಷಣ ಮಹಿಳೆಯ ಕನಸು ಅಂತ್ಯಗೊಳ್ಳುವುದಿಲ್ಲ. ಮದುವೆಯಾದ ಹೆಣ್ಣು ಮಕ್ಕಳು ಸಹ ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನು ವಿಭಿನ್ನ ವೇದಿಕೆಗಳಲ್ಲಿ ಅನಾವರಣಗೊಳಿಸಲು ಸಾಧ್ಯವಿದೆ. ಮಹಿಳೆ ಅಡುಗೆ ಮನೆಯಷ್ಟೇ ಅಲ್ಲ; ಇನ್ನುಳಿದ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಿದೆ ಎನ್ನುವುದಕ್ಕೆ ನಾನೇ ನಿದರ್ಶನ.

ಮಿಸಸ್ ಕ್ವೀನ್ ಆಫ್ ಇಂಡಿಯಾ ಕಿರೀಟ

ಗಡಿ ಜಿಲ್ಲೆ ಬೀದರ್ ಬೆಡಗಿ ಅರುಣಾ ಪಾಟೀಲ 2020ನೇ ಸಾಲಿನ ಮಿಸಸ್ ಕ್ವೀನ್ ಆಫ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ನವದೆಯಲಿಯ ಗ್ಲೋಬಲ್ ಪ್ಲೆಜೆಂಟ್ಸ್‌ನಲ್ಲಿ ಆದಿತ್ಯ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ಪ್ರಾಯೋಜಕತ್ವದಲ್ಲಿ 2021ರ ಫೆಬ್ರುವರಿ 4, 5, 6ರಂದು ಶ್ರೀಮತಿಯರಿಗಾಗಿ ಸೌಂದರ್ಯ ಸ್ಪರ್ಧೆ ನಡೆದಿತ್ತು. ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಅರುಣಾ ಪಾಟೀಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ನಿರೂಪಣೆ: ಚಂದ್ರಕಾಂತ ಮಸಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.