ಬೀದರ್: ‘ಬೀದರ್ ಜಿಲ್ಲೆಯಲ್ಲಿ 79-80 ಸಾವಿರ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಹಾನಿಯಾಗಿದೆ. ಬೀದರ್, ಕಲಬುರಗಿ ಜಿಲ್ಲೆಯಲ್ಲಿ ತೊಗರಿ, ಸೋಯಾ, ಉದ್ದು, ಹೆಸರು, ಹತ್ತಿ ಕೂಡ ಬೆಳೆಯುತ್ತಾರೆ. ತೊಗರಿ ಬೆಳೆಗಾರರಿಗೆ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಸಾಕಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಕೃಷಿ ಜಮೀನಿನ ರೈತರಿಗೆ ಸಮಸ್ಯೆಯಾಗಿದೆ. ಈ ಬಾರಿ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಒಂದು ಮತ್ತು ಎರಡನೇ ಬೆಳೆಗೂ ಹಾನಿಯಾಗಿದೆ. ಬೀದರ್ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಹೆಚ್ಚುವರಿ ಮಳೆಯಾಗಿದೆ. ಆ ಮಳೆಯಿಂದ ಜಿಲ್ಲೆಯ ಎಲ್ಲೆಡೆ ಸಾಕಷ್ಟು ಹಾನಿ ಸಂಭವಿಸಿದೆ. ಆ ರೈತರ ಪರ ನಿಲ್ಲುವುದು ನಮ್ಮ ಪಕ್ಷದ ಗುರಿಯಾಗಿದೆ’ ಎಂದು ಹೇಳಿದರು.

‘ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ನಾವು ಸಾಕಷ್ಟು ರೈತ ಪರ ಕೆಲಸ ಮಾಡಿದ್ದೇವೆ. ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಇದ್ದಾರೆ. ರೈತರಿಗೆ ದೊಡ್ಡಮಟ್ಟದ ನಷ್ಟ ಸಂಭವಿಸಿದೆ. ಕಳೆದ ವರ್ಷದ ಬೆಳೆ ವಿಮೆ ಪರಿಹಾರವೇ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದು ರೈತರು ಹೇಳಿದರು’ ಎಂದರು.

‘ರೈತರಿಗಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಮಾಡಿದ್ದಾರೆ. ರೈತ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವುದರಿಂದ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ರಸಗೊಬ್ಬರದ ವಿಷಯದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದೆ. ನಾನು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ರೈತರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಆದರೆ, ಕೃಷಿ ಸಚಿವರು ಈ ವಿಷಯದಲ್ಲಿ ಏನು ಮಾಡ್ತಿದ್ದಾರೆ ಎಂಬುದೇ ತಿಳಿಯದಂತಾಗಿದೆ’ ಎಂದರು.

‘ರಾಜ್ಯ ಸರ್ಕಾರ ಗ್ಯಾರಂಟಿ ಹೆಸರು ಹೇಳುತ್ತದೆ. ರೈತರ ಜೀವನಕ್ಕೆ ರಾಜ್ಯ ಸರ್ಕಾರ ಯಾವ ಗ್ಯಾರಂಟಿ ನೀಡಿದೆ. ರೈತರಿಗೆ ಕೇಂದ್ರದಿಂದ ಯಾವ ರೀತಿಯ ಸಹಾಯ, ಸಹಕಾರ ಬೇಕು ಆ ರೀತಿ ಸಹಾಯ ಸಹಕಾರ ಮಾಡಿಸಲು ನಾನು ಪ್ರಯತ್ನ ಮಾಡ್ತೇನೆ. ಒಂದು ವಾರದ ಒಳಗೆ ಸರ್ಕಾರ ಪರಿಹಾರ ಒದಗಿಸಿಕೊಡಬೇಕು. ಇಲ್ಲವಾದರೆ ಜೆಡಿಎಸ್ ಹೋರಾಟ ಮಾಡಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ’ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ರೈತರು ದೇಶದ ಬೆನ್ನೆಲುಬು. ನಮ್ಮ ಜೀವನಾಡಿ. ಅವರು ಅನ್ನದಾತರು, ನೀವು (ರಾಜ್ಯ ಸರ್ಕಾರದವರು) ರೈತರಿಗೆ ಯಾವ ಗ್ಯಾರಂಟಿ ನೀಡಿದ್ದಿರಿ ಎಂಬುದನ್ನು ತಿಳಿಸಬೇಕು. ನಾನು ಎರಡು ಬಾರಿ ಸಚಿವನಾಗಿದ್ದಾಗ ರೈತರ ಒಳಿತಿಗಾಗಿ ಉತ್ತಮ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದರು.

‘ರೈತರ ಪರಿಸ್ಥಿತಿ ನೋಡಿದ್ರೆ ನಮಗೆ ಕಣ್ಣಿರು ಬರುತ್ತದೆ. ಉದ್ದು, ಹೆಸರು, ತೊಗರಿ, ಸೋಯಾ ಸಂಪೂರ್ಣ ನಾಶವಾಗಿದೆ.ಈಗಾಗಲೇ ಬಂದಿರುವ ಎನ್ಡಿಆರ್ಎಫ್ ಹಣವನ್ನಾದರೂ ರೈತರಿಗೆ ಪರಿಹಾರವಾಗಿ ಕೊಡಬಹುದಾಗಿತ್ತು. ಅದನ್ನು ಕೂಡ ಮಾಡಿಲ್ಲ’ ಎಂದು ಹೇಳಿದರು.

‘ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ಕೊಡಬೇಕು ಎಂದು ನಾನು ಮನವಿ ಮಾಡುತ್ತೇನೆ. ನಿಮಗೆ ಸಾಲ ಮನ್ನಾ ಮಾಡುವ ತಾಕತ್ತು ಇಲ್ಲ. ಕನಿಷ್ಠ ರೈತರಿಗೆ ಪರಿಹಾರವಾದರೂ ಕೊಡಿ. ಬ್ಯಾಂಕ್ ಸಾಲ ವಸೂಲಿಯನ್ನು ಮೂರು ವರ್ಷದವರೆಗೂ ಮಾಡಬಾರದು. ರೈತರ ಸಾಲದ ಬಡ್ಡಿಯನ್ನು ಸರ್ಕಾರವೇ ಬರಿಸಬೇಕು’ ಎಂದರು.

ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ,‘ಸರ್ಕಾರ ಬೆಳೆ ಹಾನಿ ಪರಿಶೀಲನೆ ಮಾಡುತ್ತಿದ್ದೇವೆ ಅಂತಾನೇ ಹೇಳ್ತಿದೆ. ಇನ್ನೂವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಪರಿಹಾರ ಒದಗಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಎನ್.ಡಿ.ಆರ್.ಎಫ್ ಹಣವನ್ನು ಒದಗಿಸಿಕೊಡಬೇಕು. ಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡಬಾರದು’ ಎಂದು ಹೇಳಿದರು.

ಬಸವರಾಜ ಪಾಟೀಲ ಹಾರೂರಗೇರಿ, ದೇವೇಂದ್ರ ಸೋನಿ, ಅಶೋಕ ಕೊಡಗೆ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ತರುಣ್ ನಾಗಮಾರಪಳ್ಳಿ, ಅಭಿ ಕಾಳೆ, ಸುದರ್ಶನ ಸುಂದರರಾಜ್ ಹಾಗೂ ಶಿವಪುತ್ರ ಮಾಳಗೆ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.