ಶಶಿಕಾಂತ ಎಸ್. ಶೆಂಬೆಳ್ಳಿ

ಬೀದರ್: ಇಂದಲ್ಲ ನಾಳೆ ಸೂರು ಸಿಗಬಹುದೆಂಬ ನಿರೀಕ್ಷೆಯಲ್ಲಿ ಅಲೆಮಾರಿ ಜನಾಂಗದವರು ದಿನ ದೂಡುತ್ತಿದ್ದಾರೆ. ಆದರೆ, ಅಧಿಕಾರಸ್ಥರು ಅವರ ಬೇಡಿಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ನಗರದ ಚೌಳಿ ಕಮಾನ್ ಬಳಿ ತಾತ್ಕಾಲಿಕ ಟೆಂಟ್ಗಳಲ್ಲಿ ಅಲೆಮಾರಿಗಳು ವರ್ಷಗಳಿಂದ ಬದುಕು ನಡೆಸುತ್ತಿದ್ದಾರೆ. ಗಾಳಿ, ಚಳಿ, ಮಳೆ ಲೆಕ್ಕಿಸದೆ ಜೀವನ ಸಾಗಿಸುತ್ತಿದ್ದಾರೆ. ಸುಮಾರು 30 ವರ್ಷಗಳೇ ಕಳೆದು ಹೋಗಿವೆ. ತಾವು ವಾಸಿಸುವ ಪ್ರದೇಶದ ಸುತ್ತಮುತ್ತ ಅನೇಕ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಅದರಲ್ಲಿ ವಾಸಿಸುವವರೆಲ್ಲರೂ ಉತ್ತಮ ಬದುಕು ನಡೆಸುತ್ತಿದ್ದಾರೆ. ಅಂತಹುದೇ ಬದುಕು ತಮ್ಮದಾಗಬೇಕು, ಮುಖ್ಯವಾಹಿನಿಗೆ ಬರಬೇಕೆಂಬ ಕನಸು ಇವರದು. ಆದರೆ, ಅದು ನನಸಾಗುತ್ತಿಲ್ಲ.

ಭಿಕ್ಷಾಟನೆ, ಚಿಂದಿ ಆಯುವುದು, ಆಟಿಕೆ ಸಾಮಾನು ಮಾರಾಟ, ಕೂಲಿ ಕೆಲಸ ಮಾಡಿಕೊಂಡು ಕನಿಷ್ಠ ಸೌಲಭ್ಯಗಳಿಲ್ಲದೆ ಟೆಂಟ್ಗಳಲ್ಲಿ ಬದುಕುತ್ತಿದ್ದಾರೆ. ಸಿಂಧೋಳ, ಮಾಂಗವಾಡಿಜೋಷಿ, ಗೋಂದಳಿ, ಬುಡಬುಡಕಿ, ಘಿಸಾಡಿ ಸೇರಿದಂತೆ ಇತರೆ ಸಮುದಾಯಗಳ ಸುಮಾರು 70ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿವೆ. ಕೆಲ ಮಕ್ಕಳು ಶಾಲೆಗೆ ಹೋಗುತ್ತಾರೆ. ಇನ್ನುಳಿದವರಿಗೂ ಹೋಗಬೇಕೆಂಬ ಆಸೆ ಇದೆ. ಆದರೆ, ಅನಿವಾರ್ಯವಾಗಿ ಚಿಂದಿ ಆಯುವುದು ಸೇರಿದಂತೆ ಇತರೆ ಕೆಲಸಕ್ಕೆ ಹೋಗುತ್ತಾರೆ. ಬದುಕಿನಲ್ಲಿ ಯಾವ ಭರವಸೆಯೂ ಈ ಜನಾಂಗದವರಿಗೆ ಉಳಿದಿಲ್ಲ. ಕನಿಷ್ಠ ಸೂರಾದರೂ ಸಿಕ್ಕರೆ ಅದರಲ್ಲಿ ಇರಬಹುದು ಎಂಬ ನಿರೀಕ್ಷೆ ಇವರದು.

ಬೇಸಿಗೆಯಲ್ಲಿ ಉತ್ತಮ ಕಟ್ಟಡಗಳಿರುವ ಮನೆಗಳಲ್ಲೇ ಇರುವುದು ಕಷ್ಟ. ಆದರೆ, ಇವರು ಟೆಂಟ್ಗಳಲ್ಲಿ ಕಳೆಯುತ್ತಾರೆ. ಮಳೆಗಾಲ ಬಂತೆಂದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಮಳೆ ನೀರಿನೊಂದಿಗೆ ಹೊಲಸೆಲ್ಲ ಇವರ ಟೆಂಟಿನೊಳಗೆ ನುಗ್ಗುತ್ತದೆ. ಸುತ್ತಮುತ್ತ ದುರ್ಗಂಧ ಇರುತ್ತದೆ. ಅದರಲ್ಲೇ ಅನಿವಾರ್ಯವಾಗಿ ಕಾಲ ಕಳೆಯಬೇಕು. ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳು, ವಯಸ್ಸಾದವರು ಬಹಳ ಸಮಸ್ಯೆ ಎದುರಿಸುತ್ತಾರೆ. ಇನ್ನು, ಚೌಳಿ ಮುಖ್ಯರಸ್ತೆಯಿಂದ ನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ದೂಳಿನಿಂದ ಕಂಗೆಟ್ಟಿದ್ದಾರೆ. ಟೆಂಟ್ ತುಂಬೆಲ್ಲಾ ದೂಳು ಆವರಿಸಿಕೊಂಡಿರುತ್ತದೆ. ಅದರಲ್ಲೇ ಮಕ್ಕಳ ಆಟ, ಊಟ, ನಿದ್ರೆ ಮಾಡುತ್ತಾರೆ. ನಿವೇಶನ ಒದಗಿಸಿ ಸೂರು ಕಟ್ಟಿಕೊಟ್ಟರೆ ಕನಿಷ್ಠ ಯಾವ ಆತಂಕವಿಲ್ಲದೆ ರಾತ್ರಿ ಕಳೆಯಬಹುದು ಎನ್ನುವುದು ಅಲೆಮಾರಿಗಳ ಮಾತು.

ಸೂರಿಗಾಗಿ ಅಲೆಮಾರಿಗಳು ಅನೇಕ ಸಲ ಹೋರಾಟ ನಡೆಸಿದ್ದಾರೆ. 2023ರ ಜನವರಿಯಲ್ಲಿ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ನಡೆಸಿದ್ದರು. ಅಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಧರಣಿ ಸ್ಥಳಕ್ಕೆ ದೌಡಾಯಿಸಿ, ಸೂರು ಒದಗಿಸುವ ಭರವಸೆ ಕೊಟ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಹಾಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

‘ಅಲೆಮಾರಿಗಳ ಸೂರಿನ ಸಮಸ್ಯೆ ಬಗೆಹರಿಸಿ ಅವರಿಗೆ ನೆಲೆ ಒದಗಿಸಲಾಗುವುದು ಎಂದು ಜಿಲ್ಲಾಡಳಿತ ವರ್ಷದ ಹಿಂದೆ ಭರವಸೆ ನೀಡಿತ್ತು. ಆದರೆ, ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಅವರಿಗೆ ಪರಿಹಾರ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ. ಶೀಘ್ರದಲ್ಲೇ ಮುಂದಿನ ಹೋರಾಟದ ಕುರಿತು ಸಭೆ ನಡೆಸಿ ತೀರ್ಮಾನಿಸಲಾಗುವುದು’ ಎಂದು ಓಂಪ್ರಕಾಶ ರೊಟ್ಟೆ ‘ಪ್ರಜಾವಾಣಿ’ಗೆ ತಿಳಿಸಿದ್ಧಾರೆ.

ಜಿಲ್ಲಾಧಿಕಾರಿ ಏನಂತಾರೆ?

‘ಅಲೆಮಾರಿಗಳಿಗೆ ಸೂರು ಒದಗಿಸಲು ಜಾಗ ಗುರುತಿಸಲಾಗಿದೆ. ಆದರೆ ಅವರು ನಗರದ ಮಧ್ಯಭಾಗದಲ್ಲಿಯೇ ನಿವೇಶನ ಕೊಡಬೇಕೆಂದು ಕೇಳುತ್ತಿದ್ದಾರೆ. ನಗರದ ಮಧ್ಯಭಾಗದಲ್ಲಿರುವ ಜಮೀನು ಬಹಳ ಬೆಲೆಬಾಳುವಂತಹದು ಅದು ಕೊಡುವುದು ಕಷ್ಟವಾಗುತ್ತದೆ. ಹೀಗಾಗಿಯೇ ಇಷ್ಟರಲ್ಲಿಯೇ ಅವರನ್ನು ಕರೆದು ಸಭೆ ನಡೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.