ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢ ಶಾಲಾ ಶಿಕ್ಷಕರ ಸಂಘಕ್ಕೆ 15 ಮಂದಿ ನಾಮ ನಿರ್ದೇಶನ

Last Updated 21 ಮಾರ್ಚ್ 2023, 14:03 IST
ಅಕ್ಷರ ಗಾತ್ರ

ಬೀದರ್: ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ 14 ಪದಾಧಿಕಾರಿ ಹುದ್ದೆ ಹಾಗೂ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶನ ಮಾಡಲಾಗಿದೆ.

ಜಿಲ್ಲಾ ಘಟಕ: ಸುಧಾಕರ ಮುಳೆ (ರಾಜ್ಯ ಪ್ರತಿನಿಧಿ), ಮಹಾದೇವ ಚಿಟಗಿರೆ (ಗೌರವಾಧ್ಯಕ್ಷ), ಸಂಜುಕುಮಾರ ಮರಕಲ್, ಅಬ್ದುಲ್‍ಸಾಬ ತುಂಬೆ, ಸುಧಾರಾಣಿ ಬಿರಾದಾರ, ಯಾದುಲ್ಲಾ ಬೇಗ್ (ಉಪಾಧ್ಯಕ್ಷರು), ವಿಮಲಾಬಾಯಿ, ಪುಷ್ಪಾವತಿ ಚಿಕುರ್ತೆ, ಸುನೀತಾ ರೆಡ್ಡಿ (ಸಂಘಟನಾ ಕಾರ್ಯದರ್ಶಿ), ಸಂಜೀವಕುಮಾರ ಕದಂ, ಎಂ.ಎ. ಖಾದ್ರಿ (ಸಹ ಕಾರ್ಯದರ್ಶಿ), ವಸಂತ ರೆಡ್ಡಿ (ಸಾಂಸ್ಕøತಿಕ ಕಾರ್ಯದರ್ಶಿ), ಮಿಲಿಂದಕುಮಾರ (ಕ್ರೀಡಾ ಕಾರ್ಯದರ್ಶಿ), ಮನೋಜಕುಮಾರ ಎಲ್. ಬಿ. (ಲೆಕ್ಕ ಪರಿಶೋಧಕ).
ಹುಮನಾಬಾದ್ ತಾಲ್ಲೂಕು ಘಟಕ: ಶರದಕುಮಾರ ಎನ್. (ಅಧ್ಯಕ್ಷ).

ಸನ್ಮಾನ: ನಾಮ ನಿರ್ದೇಶನಗೊಂಡ ಪದಾಧಿಕಾರಿಗಳು ಹಾಗೂ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ಜಾವೀದ್ ಅಹಮ್ಮದ್ ಹಾಗೂ ಪ್ರಭಾಕರ ಅವರನ್ನು ಸಂಘದ ವತಿಯಿಂದ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎ. ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಶೇಖ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಕರ ಬಾಪುರೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಬಿರಾದಾರ, ಸಂಘಟನಾ ಕಾರ್ಯದರ್ಶಿ ಮಹಾದೇವ ಗಣೇಶ, ಸಹ ಕಾರ್ಯದರ್ಶಿ ಅಣ್ಣಿ ಸೋಲಪ್ಪ, ಸರ್ಕಾರಿ, ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ ರಾಗಾ, ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜು ಸೂರ್ಯವಂಶಿ, ಬಡ್ತಿ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ಹಡಪದ ಇದ್ದರು.

ಸಂಘದ ಜಿಲ್ಲಾ ಘಟಕದ ಖಜಾಂಚಿ ಸಿದ್ದಮ್ಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT