ಪ್ರಜಾವಾಣಿ ವಾರ್ತೆ

ಬಸವಕಲ್ಯಾಣ: ‘ವೃತ್ತಿ ಕೌಶಲ ತರಬೇತಿ ಪಡೆದವರಿಗೆ ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗ ಕೈಗೊಳ್ಳಲು ವಿಫುಲ ಅವಕಾಶಗಳಿವೆ. ಸ್ವಯಂ ಉದ್ಯೋಗವೂ ಕೈಗೊಳ್ಳಬಹುದು’ ಎಂದು ಪ್ರಾಚಾರ್ಯ ಜ್ಞಾನರೆಡ್ಡಿ ಬೋಳಿಂಗೆ ಹೇಳಿದ್ದಾರೆ.

ನಗರದ ಬಸವೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಟಿಇಟಿ ಹಾಗೂ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ನಿರ್ದೇಶನದಂತೆ ಭಾನುವಾರ ಆಯೋಜಿಸಿದ್ದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ದೀಕ್ಷಾಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಐಟಿಐ ಕೋರ್ಸ್ ಮಾಡಿದರೆ, ಮುಂದೆ ಉತ್ತಮ ಭವಿಷ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇದಕ್ಕೆ ಸಂಬಂಧಿಸಿದಂತೆ ಉದ್ಯೋಗಗಳು ಹುಟ್ಟಿಕೊಂಡು ಅನೇಕ ಕಂಪನಿಗಳು ಸ್ಥಾಪಿತವಾಗುತ್ತಿವೆ. ಹೀಗಾಗಿ ಇಂತಹವರಿಗೆ ಬೇಡಿಕೆ ಹೆಚ್ಚುತ್ತಿದೆ’ ಎಂದು ಹೇಳಿದರು.

‘ಈ ತರಬೇತಿ ಸಂಸ್ಥೆ ಹಲವಾರು ವರ್ಷಗಳಿಂದ ಪ್ರಶಿಕ್ಷಣ ನೀಡುತ್ತಿದೆ. ಅದರಿಂದಾಗಿ ಅನೇಕರಿಗೆ ಉದ್ಯೋಗ ದೊರೆತಿದೆ. ನಗರದ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 150 ಜನರಿಗೆ ಸ್ಥಳದಲ್ಲಿಯೇ ಉದ್ಯೋಗ ದೊರಕಿತು. ನಂತರದಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿಯೂ 45 ಜನರು ವಿವಿಧ ಕಂಪೆನಿಗಳಿಗೆ ಆಯ್ಕೆಗೊಂಡರು’ ಎಂದು ಹೇಳಿದರು.

ಜಗನ್ನಾಥ ಖ್ಯಾಡೆ, ರಾಜಕುಮಾರ ನಾಗರಾಳೆ ಮಾತನಾಡಿದರು. ಹೆಚ್ಚಿನ ಅಂಕ ಪಡೆದಿರುವ ನಿತೀನ ರಮೇಶ ಸಕ್ಕರಭಾವಿ, ಆದಿತ್ಯ ಕೇಶವ ಹಾಗೂ ಕಾಶಿನಾಥ ವಿಠಲ್ ಅವರನ್ನು ಸನ್ಮಾನಿಸಲಾಯಿತು. ಪ್ರಶಿಕ್ಷಣಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಬಸವೇಶ್ವರ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೋರಕೆ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಪ್ರಮುಖರಾದ ಕಾಶಪ್ಪ ಸಕ್ಕರಬಾವಿ, ವಿಲಾಸ ಶಿಂಧೆ, ಬಸವರಾಜ ರಾಚಪ್ಪ, ಸೂರ್ಯಕಾಂತ ಬೇಲೂರೆ, ಬಸವರಾಜಕುಮಾರ ಹಾಲಣ್ಣ, ವಿಜಯಕುಮಾರ ಗುದಗೆ, ವಿನೋದ ಹೊಳಕುಂದೆ, ಶರಣಪ್ಪ ದುರ್ಗೆ, ಸಂಗಮೇಶ್ವರ ಹಂಚೆ, ಸಾವಿತ್ರಿಬಾಯಿ, ರಚನಾ ಚಿರಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.