ಬೀದರ್: ವೈರಾಣು ಜ್ವರದಿಂದ ಜಿಲ್ಲೆಯ ಜನ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾಣಿಸಿಕೊಂಡಿರುವ ‘ಫ್ಲೂ’ ಇದೀಗ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡಿದೆ.

ಮನೆಯ ಒಬ್ಬ ಸದಸ್ಯನಿಗೆ ಜ್ವರ ಬಂದರೆ ಇಡೀ ಕುಟುಂಬಕ್ಕೆ ಆವರಿಸಿಕೊಳ್ಳುತ್ತಿದೆ. ಗುಣಮುಖರಾಗಲು ಕನಿಷ್ಠ ಎರಡರಿಂದ ಮೂರು ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತಿದೆ. ಜ್ವರದಿಂದ ಮೂಗು ಕಟ್ಟಿಕೊಳ್ಳುವುದು, ಒಣ ಕೆಮ್ಮು ಕೂಡ ಕಾಣಿಸಿಕೊಳ್ಳುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜ್ವರ ಬಂದವರು ತೀವ್ರ ನಿಶ್ಯಕ್ತಿಗೆ ಒಳಗಾಗಿ ದುರ್ಬಲರಾಗುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಗುಣಮುಖರಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಸದ್ಯ ಡೆಂಗಿ, ಚಿಕುನ್ಗುನ್ಯ ಪ್ರಕರಣಗಳು ಹೇಳಿಕೊಳ್ಳುವಂತಹ ರೀತಿಯಲ್ಲಿ ಇಲ್ಲ. ಆದರೆ, ವೈರಾಣು ಜ್ವರ ಜನರ ನೆಮ್ಮದಿ ಕಸಿದಿದೆ.

ಯಾರು ಮುತುವರ್ಜಿ ವಹಿಸಬೇಕು?:

ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಈ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ಮತ್ತು ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಬೇಗನೆ ಅವರಿಗೆ ಜ್ವರ ಬಂದು ಆರೋಗ್ಯ ಕೆಡಬಹುದು. ಗರ್ಭಿಣಿಯ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿಗೂ ಸಮಸ್ಯೆ ಆಗಬಹುದು. ಅವರು ಕೂಡ ವಿಶೇಷ ಮುತುವರ್ಜಿ ವಹಿಸಬೇಕು. ಜ್ವರ ಬಂದಾಗ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಆಸ್ಪತ್ರೆಗೆ ತೆರಳಬೇಕು. ನಿರ್ಲಕ್ಷ್ಯ ತೋರಿದರೆ ಜ್ವರ ತಲೆಗೆ ಏರಿ ದೊಡ್ಡ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಯಾರ ಮನೆಯಲ್ಲಿ ಮಕ್ಕಳು, ವಯಸ್ಸಾದವರು ಇದ್ದಾರೋ ಅಂತಹವರ ಮನೆಯಲ್ಲಿ ಯಾರಿಗಾದರೂ ವೈರಾಣು ಜ್ವರ ಬಂದರೆ ಅವರು ಗುಣಮುಖರಾಗುವವರೆಗೆ ಮಾಸ್ಕ್ ಧರಿಸಿ, ಪ್ರತ್ಯೇಕ ಕೋಣೆಯಲ್ಲಿ ಇರುವುದು ಸೂಕ್ತ. ಇದರಿಂದ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ನಿರ್ಲಕ್ಷ್ಯ ವಹಿಸಿ ಜನ ಓಡಾಡುತ್ತಿರುವುದರಿಂದಲೂ ಜ್ವರ ವ್ಯಾಪಕವಾಗಿ ಹರಡಲು ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.

ಡೆಂಗಿ, ಚಿಕುನ್ಗುನ್ಯ ಹೆಚ್ಚುವ ಆತಂಕ:

ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುತ್ತಿರುವುದರಿಂದ ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳು ಏಕಾಏಕಿ ಪುನಃ ಹೆಚ್ಚಾಗಿವೆ. ಪುನಃ ಡೆಂಗಿ, ಚಿಕುನ್ಗುನ್ಯ ಹೆಚ್ಚುವ ಆತಂಕ ಹೆಚ್ಚಾಗಿದೆ.

ಆರೋಗ್ಯ ಇಲಾಖೆಯಿಂದ ಸಾಕಷ್ಟು ಪ್ರಚಾರ ಕೈಗೊಂಡರೂ ಕೂಡ ಸ್ವಚ್ಛತೆಯ ಕಡೆಗೆ ಸಾರ್ವಜನಿಕರು ಹೆಚ್ಚಾಗಿ ಗಮನ ಹರಿಸುತ್ತಿಲ್ಲ. ಈಗಲೂ ಎಲ್ಲೆಂದರಲ್ಲಿ ಕಸ ಎಸೆದು ಹೋಗಲಾಗುತ್ತಿದೆ. ನಗರದ ಮೈಲೂರ್ ಮುಖ್ಯರಸ್ತೆ, ರಿಂಗ್ರೋಡ್, ಚಿದ್ರಿಯಲ್ಲಂತೂ ರಸ್ತೆ ವಿಭಜಕಗಳ ನಡುವೆಯೇ ಜನ ಕಸ ಸುರಿದು ಹೋಗುತ್ತಿದ್ದಾರೆ. ನಗರಸಭೆಯವರು ಸಕಾಲಕ್ಕೆ ಅದನ್ನು ವಿಲೇವಾರಿಗೊಳಿಸುತ್ತಿಲ್ಲ. ಅನೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಅವುಗಳು ಕೂಡ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ.

‘ವಾತಾವರಣದಿಂದ ಈ ಸಮಸ್ಯೆ’

‘ವಾತಾವರಣದಲ್ಲಿ ಆಗುತ್ತಿರುವ ಏರುಪೇರಿನಿಂದ ವೈರಾಣು ಜ್ವರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಏಕಾಏಕಿ ಮಳೆ ಇದಾದ ಕೆಲವೇ ನಿಮಿಷಗಳಲ್ಲಿ ಬಿಸಿಲು ಬರುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಆಗುತ್ತಿದೆ. ಈ ರೀತಿ ಏಳೆಂಟು ವರ್ಷಗಳಿಗೊಮ್ಮೆ ಆಗುತ್ತಿರುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ. ‘ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೇಗ ವೈರಾಣು ಜ್ವರ ಬರುತ್ತದೆ. ಕೋವಿಡ್ ಬಂದು ಹೋದ ನಂತರ ಜನರ ರೋಗ ನಿರೋಧಕ ಶಕ್ತಿ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದ್ದು ಎಲ್ಲರಿಗೂ ಒಂದು ಸಲ ಬಂದು ಹೋಗುವ ಸಾಧ್ಯತೆ ಇದೆ. ಜ್ವರ ಬಂದ ತಕ್ಷಣ ವೈದ್ಯರನ್ನು ಕಾಣುವುದು ಉತ್ತಮ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಮೆಡಿಕಲ್ಗಳಿಗೆ ತೆರಳಿ ಯಾರೂ ಕೂಡ ಔಷಧಿ ತೆಗೆದುಕೊಳ್ಳಬಾರದು. ವೈದ್ಯರನ್ನು ಕಂಡು ಅವರು ಸೂಚಿಸಿದ ಔಷಧಿಗಳನ್ನೇ ತೆಗೆದುಕೊಳ್ಳಬೇಕು. ಜ್ವರ ಬಂದವರು ಹುಷಾರಾಗುವವರೆಗೆ ಪ್ರತ್ಯೇಕ ವಾಸ ಇರಬೇಕು. ಇಲ್ಲವಾದರೆ ಕುಟುಂಬದ ಎಲ್ಲ ಸದಸ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ. ಆದಷ್ಟು ಬೆಚ್ಚಗೆ ಇರಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.