ಶುಕ್ರವಾರ, ಫೆಬ್ರವರಿ 28, 2020
19 °C

ಓವೈಸಿ ಯೋಗ್ಯತೆ ಹೈದರಾಬಾದ್‌ಗೆ ಸಿಮೀತವಾಗಲಿ: ಸಚಿವ ಪ್ರಭು ಚವಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಿಎಎ, ಎನ್‍ಆರ್‌ಸಿ ಮತ್ತು ಎನ್‍ಆರ್‌ಪಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಪ್ರಧಾನಿಯನ್ನು ನಾಟಕದಲ್ಲಿ ಅವಹೇಳನಕಾರಿಯಾಗಿ ನಾಟಕ ಮಾಡಿಸಿದ್ದು ಅಪರಾಧ. ಹೈದರಾಬಾದ್‌ನ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಗರದ ಶಾಹೀನ್ ಸಂಸ್ಥೆಗೆ ಹಾಗೂ ಜೈಲಿನಲ್ಲಿರುವ ಆರೋಪಿಗಳಿಗೆ ಭೇಟಿ ಮಾಡುವ ಮೂಲಕ ಆರೋಪವನ್ನು ಸಮರ್ಥಿಸುವ ಕೆಲಸ ಮಾಡಿದ್ದಾರೆ’ ಎಂದು ಸಚಿವ ಪ್ರಭು ಚವಾಣ ತಿಳಿಸಿದ್ದಾರೆ.

‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವನಾಗಿ ಅವರ ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ. ಅದನ್ನು ಓವೈಸಿ ಕಡೆಯಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಓವೈಸಿ ಎಂದಿಗೂ ದೇಶ ವಿರೋಧಿಸುವವರ ಪರವಾಗಿ ಮಾತನಾಡುತ್ತಾರೆ. ಈ ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅಪಮಾನಿಸುವುದು ಸಂವಿಧಾನವನ್ನೇ ಅಪಮಾನಿಸಿದಂತೆ’ ಎಂದು ಕಿಡಿಕಾರಿದ್ದಾರೆ.

ಮೋದಿಯವರನ್ನು ಅವಮಾನಿಸುವುದು ದೇಶವನ್ನೇ ಅವಮಾನಿಸಿದಂತೆ. ಸಿಎಎ ಮತ್ತು ಎನ್‍ಆರ್‌ಸಿಗಳು ದೇಶದ ಮುಸ್ಲಿಂರ ವಿರುದ್ಧ ಅಲ್ಲ ಎನ್ನುವುದು ಇಡೀ ದೇಶಕ್ಕೆ ಗೊತ್ತಿದ್ದರೂ ಕಾಂಗ್ರೆಸ್ ಮತ್ತು ಓವೈಸಿ ಅಂಥವರು ಈ ಕಾನೂನುಗಳು ಮುಸ್ಲಿಂರ ವಿರುದ್ಧ ಎಂದು ಪ್ರಚಾರ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಓವೈಸಿಯ ಯೋಗ್ಯತೆ ಏನಿದ್ದರೂ ಹೈದರಾಬಾದ್‌ಗೆ ಸಿಮೀತವಾಗಲಿ. ಬೀದರ್‌ನ ಮುಸ್ಲಿಂರು ಓವೈಸಿ ಮಾತನ್ನು ನಂಬುವ ಅವಶ್ಯಕವಿಲ್ಲ. ಇಲ್ಲಿನ ಪೊಲೀಸರು ಕಾನೂನು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಕರಣಗಳನ್ನು ವಾಪಸ್ಸು ಪಡೆಯುವಂತೆ ಅಥವಾ ಕಲಂಗಳನ್ನು ಬದಲಿಸುವಂತೆ ಹೇಳಲು ಓವೈಸಿ ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಪೊಲೀಸರು ಓವೈಸಿಯ ಒತ್ತಡಕ್ಕೆ ಒಳಗಾಗಬಾರದು. ಆರೋಪಿಗಳು ನಿರಪರಾಧಿಗಳಾಗಿದ್ದರೆ ಅದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಬೀದರ್‌ನಲ್ಲಿ ಹಿಂದೂ-ಮುಸ್ಲಿಂರ ಮಧ್ಯೆ ಜಗಳ ಹಚ್ಚಲು ಓವೈಸಿ ಬರಬಾರದು. ಜಿಲ್ಲೆಯ ಮುಸ್ಲಿಂ ಸಮುದಾಯದವರು ಓವೈಸಿಯ ಮಾತುಗಳಿಗೆ ಒಳಗಾಗಬಾರದು. ಓವೈಸಿಗೆ ಈ ದೇಶದ ಕಾನೂನು ಸುವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲವಾದರೆ ಅವರು ಬೇರೆ ದೇಶಕ್ಕೆ ಹೋಗಬಹುದು’ ಎಂದು ಖಾರವಾಗಿ ಹೇಳಿದ್ದಾರೆ. ಶಾಹೀನ್ ಸಂಸ್ಥೆ ಬೀದರ್‌ ಜಿಲ್ಲೆಯ ಜನರಿಂದಲೇ ದೊಡ್ಡ ಸಂಸ್ಥೆಯಾಗಿದೆ ಎನ್ನುವುದನ್ನು ಮರೆಯಬಾರದು. ತನ್ನ ಸಂಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕೆ ಹೊರತು ದೇಶವಿರೋಧಿ ಸಂದೇಶಗಳನ್ನು ಕಲಿಸಿಕೊಡುವ ಸಂಸ್ಥೆಯಾಗಬಾರದು. ಹೀಗಾದರೆ ಮುಂದೊಂದು ದಿನ ಆತಂಕವಾದಿಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗುತ್ತವೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು