ಸೋಮವಾರ, ಜನವರಿ 27, 2020
20 °C

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೆರವಣಿಗೆ | ಪೊಲೀಸ್‌ ಪಡೆಗಳಿಂದ ಪಥ ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ರಾಷ್ಟ್ರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಧ್ಯಾಹ್ನ 12 ಗಂಟೆಗೆ ಬೃಹತ್‌ ರ್‍ಯಾಲಿ ನಡೆಸಲಿರುವ ಪ್ರಯುಕ್ತ ನಗರದಲ್ಲಿ ಪೊಲೀಸರು ಪಥ ಸಂಚಲನ ಆರಂಭಿಸಿದರು.

ರೋಟರಿ ವೃತ್ತ ಸಮೀಪದ ಸಾಯಿ ಆದರ್ಶ ಶಾಲೆಯಿಂದ ಆರಂಭವಾದ ಪಥಸಂಚಲನ, ಜನರಲ್‌ ಕಾರ್ಯಪ್ಪ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್‌ ವೃತ್ತ, ಹರಳ್ಳ ವೃತ್ತದ ಮಾರ್ಗವಾಗಿ ಗಣೇಶ ಮೈದಾನಕ್ಕೆ ಬರಲಿದೆ. 

ರಾಷ್ಟ್ರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಧನ್ನೂರ, ನಾಗೇಶ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ವೇದಿಕೆಯ ಕಾರ್ಯಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಉಪಾಧ್ಯಕ್ಷರಾದ ಭರತ ಶೆಟಕಾರ, ಪ್ರಕಾಶ ಟೊಣ್ಣೆ, ಕಾರ್ಯದರ್ಶಿಗಳಾದ ರಮೇಶ ಕುಲಕರ್ಣಿ, ವೀರೇಂದ್ರ ಶಾಸ್ತ್ರಿ, ಸಂಚಾಲಕ ಭಗುಸಿಂಗ್ ಜಾಧವ, ಸಹ ಸಂಚಾಲಕ ಶಿವಶರಣಪ್ಪ ಪಾಟೀಲ, ವಕೀಲೆ ಶಕುಂತಲಾ, ಸುನೀಲ ಮೊಟ್ಟಿ, ರಂಜೀತ್ ಪಾಟೀಲ ಪಾಲ್ಗೊಳ್ಳಿದ್ದಾರೆ. 

ಸಂಸದ ಭಗವಂತ ಖೂಬಾ, ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ಗುರುಬಸವ ಪಟ್ಟದ್ದೇವರು, ಡಾ. ಗಂಗಾಂಬಿಕೆ ಅಕ್ಕ, ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ, ತಡೋಳಾ-ಮೆಹಕರದ ರಾಜೇಶ್ವರ ಶಿವಾಚಾರ್ಯರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಮಾತೆ ಸತ್ಯದೇವಿ  ಅವರಿಗೆ ಆಹ್ವಾನ ನೀಡಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು