ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್: ರೈತರಲ್ಲಿ ಮಂದಹಾಸ ತಂದ ಮಳೆ

Published 3 ಜೂನ್ 2024, 16:01 IST
Last Updated 3 ಜೂನ್ 2024, 16:01 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಮಳೆಯಾಗಿ ಬಿಸಿಲಿನಿಂದ ಬಸವಳಿದ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ.

ಔರಾದ್ ಹೋಬಳಿಯಲ್ಲಿ 34.4 ಮಿ.ಮೀ., ಚಿಂತಾಕಿ 12.4 ಮಿ.ಮೀ., ಸಂತಪುರ 10.6 ಮಿ.ಮೀ., ದಾಬಕಾ 4.4 ಮಿ.ಮೀ., ಠಾಣಾಕುಶನೂರ 3.10 ಮಿ.ಮೀ ಮಳೆಯಾಗಿದೆ. ಇದರಿಂದ ಬಿತ್ತನೆ ಸಿದ್ಧತೆಯಲ್ಲಿರುವ ರೈತರಲ್ಲಿ ಆಶಾಭಾವ ಮೂಡಿದೆ.

ರೈತರಿಗೆ ಸಲಹೆ: ಸೋಯಾ ಬಿತ್ತನೆ ಮಾಡುವ ರೈತರು ಬಹಳ ಕಾಳಜಿ ವಹಿಸಬೇಕಾಗಿದೆ. 70ರಿಂದ 80 ಮಿ.ಮೀ. ಮಳೆಯಾದರೆ ಮಾತ್ರ ಸೋಯಾ ಬಿತ್ತನೆ ಮಾಡಬೇಕು. 4ರಿಂದ 5 ಸೆಂಟಿ ಮೀಟರ್ ಆಳದಲ್ಲಿ ಸೋಯಾ ಬೀಜ ಬಿತ್ತಬೇಕು. ಖರೀದಿ ಮಾಡಿದ ಸೋಯಾ ಬೀಜದ ಚೀಲ ಬೇಕಾಬಿಟ್ಟಿ ಬೀಸಾಡುವುದು ಮಾಡಬಾರದು. ಸೋಯಾಗೆ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಬರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT